ಭಾರತ ‘ಎ’ ಎದುರಿನ ಸರಣಿಗೆ ಆಸ್ಟ್ರೇಲಿಯಾ ತಂಡ

7

ಭಾರತ ‘ಎ’ ಎದುರಿನ ಸರಣಿಗೆ ಆಸ್ಟ್ರೇಲಿಯಾ ತಂಡ

Published:
Updated:
ಭಾರತ ‘ಎ’ ಎದುರಿನ ಸರಣಿಗೆ ಆಸ್ಟ್ರೇಲಿಯಾ ತಂಡ

ಮೆಲ್ಬರ್ನ್‌: ಮುಂಬರುವ ಭಾರತ ‘ಎ’ ವಿರುದ್ಧದ ಕ್ರಿಕೆಟ್‌ ಸರಣಿಗಳಿಗೆ ಬುಧವಾರ ಆಸ್ಟ್ರೇಲಿಯಾ ‘ಎ’ ತಂಡಗಳನ್ನು ಪ್ರಕಟಿಸಲಾಗಿದೆ.

ನಾಲ್ಕು ದಿನಗಳ ಟೆಸ್ಟ್‌ ಸರಣಿಯಲ್ಲಿ ಆಲ್‌ರೌಂಡರ್‌ ಮಿಷೆಲ್‌ ಮಾರ್ಷ್‌ ತಂಡವನ್ನು ಮುನ್ನಡೆಸಲಿದ್ದಾರೆ. ತ್ರಿಕೋನ ಏಕದಿನ ಸರಣಿಯಲ್ಲಿ ಟ್ರಾವಿಸ್‌ ಹೆಡ್‌ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ.

ಆಗಸ್ಟ್‌ನಲ್ಲಿ ವಿಜಯವಾಡದಲ್ಲಿ ಆಯೋಜನೆಯಾಗಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ನಾಲ್ಕು ದಿನಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್‌ 2ರಿಂದ ವಿಶಾಖಪಟ್ಟಣದಲ್ಲಿ ಜರುಗಲಿದೆ. ಜೋ ಬರ್ನ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಶಾನ್‌ ಮಾರ್ಷ್‌ ಅವರು ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಟೆಸ್ಟ್‌ ತಂಡ: ಮಿಷೆಲ್‌ ಮಾರ್ಷ್‌ (ನಾಯಕ), ಅಲೆಕ್ಸ್‌ ಕೇರಿ (ಉಪ ನಾಯಕ), ಆ್ಯಷ್ಟನ್‌ ಅಗರ್‌, ಬ್ರೆಂಡನ್‌ ಡೊಗೆಟ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಟ್ರಾವಿಸ್‌ ಹೆಡ್‌, ಜಾನ್‌ ಹಾಲಂಡ್‌, ಉಸ್ಮಾನ್‌ ಖ್ವಾಜಾ, ಮಿಷೆಲ್‌ ನೆಸರ್‌, ಜೋಯೆಲ್‌ ಪ್ಯಾರಿಸ್‌, ಕರ್ಟಿಸ್‌ ಪ್ಯಾಟರ್‌ಸನ್‌, ಮ್ಯಾಥ್ಯೂ ರೆನ್‌ಶಾ, ಮಿಷ್‌ ಸ್ವೆಪ್ಸನ್‌ ಮತ್ತು ಕ್ರಿಸ್‌ ಟ್ರೆಮೈನ್‌.

ಏಕದಿನ ತಂಡ: ಟ್ರಾವಿಸ್‌ ಹೆಡ್‌ (ನಾಯಕ), ಅಲೆಕ್ಸ್‌ ಕೇರಿ (ಉಪ ನಾಯಕ), ಆ್ಯಷ್ಟನ್‌ ಅಗರ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಸ್‌ ಚಾಗ್ನೆ, ಮಿಷೆಲ್‌ ನೆಸರ್‌, ಮ್ಯಾಥ್ಯೂ ರೆನ್‌ಶಾ, ಜೇ ರಿಚರ್ಡ್‌ಸನ್‌, ಡಿ ಆರ್ಸಿ ಶಾರ್ಟ್‌, ಬಿಲ್ಲಿ ಸ್ಟಾನ್‌ಲೇಕ್‌, ಮಿಷ್‌ ಸ್ವೆಪ್ಸನ್‌, ಕ್ರಿಸ್‌ ಟ್ರೆಮೈನ್‌ ಮತ್ತು ಜ್ಯಾಕ್‌ ವಿಲ್ಡರ್‌ಮಥ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry