ಮಿಂಚುವ ವಿಶ್ವಾಸವಿದೆ: ಮಾರ್ಗನ್‌

7

ಮಿಂಚುವ ವಿಶ್ವಾಸವಿದೆ: ಮಾರ್ಗನ್‌

Published:
Updated:
ಮಿಂಚುವ ವಿಶ್ವಾಸವಿದೆ: ಮಾರ್ಗನ್‌

ಲಂಡನ್: ‘ಮುಂದಿನ ತಿಂಗಳು ನಡೆಯುವ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಮಿಂಚುವ ವಿಶ್ವಾಸವಿದೆ’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಎಯಾನ್‌ ಮಾರ್ಗನ್‌ ನುಡಿದಿದ್ದಾರೆ.

ಮಿಡಲ್‌ಸೆಕ್ಸ್‌ ಕ್ಲಬ್‌ನ ಆಟಗಾರ ಮಾರ್ಗನ್ ಅವರು ಭಾನುವಾರ ನಡೆದಿದ್ದ ಸೋಮರ್‌ಸೆಟ್‌ ವಿರುದ್ಧದ ರಾಯಲ್‌ ಲಂಡನ್‌ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಗಾಯಗೊಂಡಿದ್ದರು. ಕ್ಷೇತ್ರರಕ್ಷಣೆಯ ವೇಳೆ ಅವರ ಬಲಗೈನ ಉಂಗುರದ ಬೆರಳಿಗೆ ಪೆಟ್ಟಾಗಿತ್ತು.

ಹೀಗಾಗಿ ಗುರುವಾರ ಲಾರ್ಡ್ಸ್‌ ಅಂಗಳದಲ್ಲಿ ನಡೆಯುವ ವಿಶ್ವ ಇಲೆವನ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಸೌಹಾರ್ದ ಟ್ವೆಂಟಿ–20 ಪಂದ್ಯದಿಂದ ಅವರು ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್‌ ತಂಡ ಜೂನ್‌ 10ರಂದು ಸ್ಕಾಟ್ಲೆಂಡ್‌ ವಿರುದ್ಧ ಏಕದಿನ ಪಂದ್ಯ ಆಡಲಿದೆ. ನಂತರ ಆಸ್ಟ್ರೇಲಿಯಾ ಎದುರು ಐದು ಪಂದ್ಯಗಳ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಭಾಗವಹಿಸಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಜೂನ್‌ 13ರಂದು ನಿಗದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry