ರಾಜ್ಯ ಮಟ್ಟದ ಯೋಗ ಸ್ಪರ್ಧೆ

7

ರಾಜ್ಯ ಮಟ್ಟದ ಯೋಗ ಸ್ಪರ್ಧೆ

Published:
Updated:
ರಾಜ್ಯ ಮಟ್ಟದ ಯೋಗ ಸ್ಪರ್ಧೆ

ಬೆಂಗಳೂರು: ಯೋಗ ಗಂಗೋತ್ರಿ ಸಂಸ್ಥೆಯು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಗ ಸ್ಪರ್ಧೆಯನ್ನು ಕ್ರಮವಾಗಿ ಜೂನ್‌ 9 ಮತ್ತು 10ರಂದು ಹಮ್ಮಿಕೊಂಡಿದೆ.

ಬೆಂಗಳೂರು ಉತ್ತರ ಜಿಲ್ಲಾ ಮಟ್ಟದ ಸ್ಪರ್ಧೆಯು ಜಯನಗರ ನಾಲ್ಕನೇ ಟಿ ಬ್ಲಾಕ್‌ನ ಎಸ್‌.ಎಸ್‌.ಎಂ.ಆರ್‌.ವಿ. ಕಾಲೇಜು ಆವರಣದಲ್ಲಿ, ದಕ್ಷಿಣ ಜಿಲ್ಲಾ ಮಟ್ಟದ ಸ್ಪರ್ಧೆಯು ಮಹಾಲಕ್ಷ್ಮಿಪುರದ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ರಾಜ್ಯ ಮಟ್ಟದ ಸ್ಪರ್ಧೆಯು ಜೂನ್‌ 10ರಂದು ಜಯನಗರ ನಾಲ್ಕನೇ ಬ್ಲಾಕ್‌ 36ನೇ ಅಡ್ಡರಸ್ತೆಯ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಎರಡೂ ಸ್ಪರ್ಧೆಗಳು ಆಯಾ ಸ್ಥಳಗಳಲ್ಲಿ ಬೆಳಿಗ್ಗೆ 9ರಿಂದ ಆರಂಭವಾಗಲಿವೆ. ಪ್ರವೇಶ ಶುಲ್ಕ ₹ 250. ಮಾಹಿತಿ ಹಾಗೂ ನೋಂದಣಿಗೆ www.yogagangotri.org ದೂರವಾಣಿ ಸಂಖ್ಯೆ: 080–49583086 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry