7

ಕೋಮು ಸೌಹಾರ್ದಕ್ಕೆ ವೇದಿಕೆಯಾದ ಮಳೆ!

Published:
Updated:
ಕೋಮು ಸೌಹಾರ್ದಕ್ಕೆ ವೇದಿಕೆಯಾದ ಮಳೆ!

ಮಂಗಳೂರು: ಮಂಗಳವಾರ ಸುರಿದ ಮಳೆ ನಗರದಾದ್ಯಂತ ಭಾರಿ ಅನಾಹುತ ಸೃಷ್ಟಿಸಿದ್ದರೂ, ಕೋಮು ಸೌಹಾರ್ದವನ್ನು ಬಡಿದೆಬ್ಬಿಸುವಲ್ಲಿಯೂ ಯಶಸ್ವಿಯಾಗಿದೆ. ನಗರದ ದೇವಾಲಯವೊಂದರಲ್ಲಿ ಸೇರಿದ್ದ ನೀರನ್ನು ಹೊರತೆಗೆಯುವ ಮೂಲಕ ಸೌಹಾರ್ದ ಮೆರೆದ ಮುಸ್ಲಿಮ್‌ ಯುವಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಂಗಳವಾರ ಎಡೆಬಿಡದೇ ಸುರಿದ ಮಳೆಯಿಂದಾಗಿ ನಗರದ ಪಾಂಡೇಶ್ವರದ ಕೊರಗಜ್ಜನ ದೈವಸ್ಥಾನಕ್ಕೆ ನೀರು ನುಗ್ಗಿತ್ತು. ಈ ಸಂದರ್ಭದಲ್ಲಿ ದೈವಸ್ಥಾನದ ನೀರು ಹೊರಹಾಕಿ ಸ್ವಚ್ಛತೆಗೆ ಟೊಂಕ ಕಟ್ಟಿದವರು ಸ್ಥಳೀಯ ಮುಸ್ಲಿಮರು.

ಇನ್ನೊಂದೆಡೆ, ಸಂಘ ನಿಕೇತನದಲ್ಲಿ ಮಳೆಯ ಸಂತ್ರಸ್ತರಿಗೆ ಜಾತಿ, ಭೇದ ಎಣಿಸದೇ ಬಟ್ಟೆ, ಹಾಸಿಗೆ, ಊಟ, ವಸತಿ ಒದಗಿಸುವ ಮೂಲಕ ಸೌಹಾರ್ದದ ಕಾರ್ಯ ಮಾಡಲಾಯಿತು.

ಎರ್ಮಾಯಿ ಫಾಲ್ಸ್‌ನಲ್ಲೂ ಸಹಕಾರ: ಉಜಿರೆ ಸಮೀಪದ ಎರ್ಮಾಯಿ ಫಾಲ್ಸ್‌ನಲ್ಲಿ ಮೃತಪಟ್ಟ ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಕಟೀಲು ಮೃತದೇಹವನ್ನು ಎತ್ತುವ ಕಾರ್ಯದಲ್ಲಿ ಸ್ಥಳೀಯರ ಜತೆಗೆ ಕೆಲಸ ಮಾಡಿದವರು ಮೂವರು ಮುಸ್ಲಿಂ ಯುವಕರು.

ರಂಜಾನ್‌ ವ್ರತಾಚರಣೆಯಲ್ಲಿದ್ದ ಫಾರೂಕ್‌, ಸಲಾಂ ಹಾಗೂ ಬಾಬಾ ಆಂಬುಲೆನ್ಸ್‌ನ ಜಲೀಲ್‌ ಅವರು, ಸಂತೋಷ್‌ ಶೆಟ್ಟಿ ಅವರ ಮೃತ

ದೇಹವನ್ನು ಎತ್ತುವಲ್ಲಿ ಸಹಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry