ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ: ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 7 ಪೈಸೆ, ಡಿಸೇಲ್‌ ಬೆಲೆ 5 ಪೈಸೆ ಇಳಿಕೆ

Last Updated 31 ಮೇ 2018, 9:02 IST
ಅಕ್ಷರ ಗಾತ್ರ

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಕ್ರಮವಾಗಿ 7 ಮತ್ತು 5 ಯಷ್ಟು ಇಳಿಕೆಯಾಗಿದೆ.

ಕಳೆದ 16 ದಿನಗಳ ನಿರಂತರ ಬೆಲೆ ಏರಿಕೆ ನಂತರ ಇದೀಗ ಎರಡನೇ ಸಲ ಬೆಲೆ ಇಳಿಕೆಯಾಗಿದೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹ 78.42 ರಿಂದ ₹ 78.35 ಕ್ಕೆ ಇಳಿದಿದ್ದರೆ, ಡೀಸೆಲ್‌ ಬೆಲೆ ₹ 69.30 ರಿಂದ 69.25ಕ್ಕೆ ಇಳಿದಿದೆ.

ಬುಧವಾರ ಪ್ರತಿ ಲೀಟರ್‌ ಪೆಟ್ರೋಲ್ ಹಾಗೂ ಡಿಸೇಲ್‌ ದರವನ್ನು ತಲಾ ಒಂದೊಂದು ಪೈಸೆ ಇಳಿಕೆ ಮಾಡಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

‍‍[Related]

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೂರು ವಾರ ಬಾಕಿ ಇರುವಾಗಲೇ ಬೆಲೆ ಪರಿಷ್ಕರಣೆಗೆ ವಿರಾಮ ನೀಡಲಾಗಿತ್ತು. ಚುನಾವಣೆ ಬಳಿಕ ಮೇ 14ರಿಂದ ಸತತ ಬೆಲೆ ಏರಿಕೆಯಾಗಿ ಪೆಟ್ರೋಲ್‌ ಹಾಗೂ ಡಿಸೇಲ್‌ ದರಗಳು ಕ್ರಮವಾಗಿ ₹ 3.8, ₹ 3.38 ರಷ್ಟು ಹೆಚ್ಚಳವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT