ಯೋಗಕ್ಷೇಮ ವಿಚಾರಿಸಲು ಬಂದ ರಜನಿಕಾಂತ್‌ರನ್ನು ನೀವ್ಯಾರು ಎಂದು ಕೇಳಿದ ಯುವಕ

7

ಯೋಗಕ್ಷೇಮ ವಿಚಾರಿಸಲು ಬಂದ ರಜನಿಕಾಂತ್‌ರನ್ನು ನೀವ್ಯಾರು ಎಂದು ಕೇಳಿದ ಯುವಕ

Published:
Updated:
ಯೋಗಕ್ಷೇಮ ವಿಚಾರಿಸಲು ಬಂದ ರಜನಿಕಾಂತ್‌ರನ್ನು ನೀವ್ಯಾರು ಎಂದು ಕೇಳಿದ ಯುವಕ

ಚೆನ್ನೈ: ತೂತ್ತುಕುಡಿಯ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕ ಮುಚ್ಚಲು ಒತ್ತಾಯಿಸಿ ಕೈಗೊಂಡ ಪ್ರತಿಭಟನೆಯಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಲು ತೆರಳಿದ್ದ ನಟ ರಜನಿಕಾಂತ್‌ರಿಗೆ ಯುವಕನೊರ್ವ ‘ನೀವು ಯಾರು?’ ಎಂದು ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ತೂತ್ತುಕುಡಿಯ 21 ವರ್ಷದ ಸಂತೋಷ್‌ ಕೇಳಿದ ಈ ಪ್ರಶ್ನೆಗೆ ‘ನಾನು ರಜನಿಕಾಂತ್‌!’ ಎಂದು ನಟ ರಜನಿ ಉತ್ತರಿಸಿದ್ದಾರೆ. ಈ ಪ್ರಸಂಗವೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ.

‘ರಜನಿಕಾಂತ್‌ ಅಧಿಕಾರದ ಗದ್ದುಗೆ ಏರಲು ನಟನಾ ರಂಗದಿಂದ ದೂರವಾಗುತ್ತಿರುವುದರಿಂದ ಅವರು ನನ್ನ ಗೌರವ ಕಳೆದುಕೊಂಡಿದ್ದಾರೆ’ ಎಂದು ಫಿಲಿಪ್‌ ರಾಜಾಮೊಹನ್‌ ಟ್ವೀಟ್‌ ಮಾಡಿದ್ದಾರೆ.

‘ತೂತ್ತುಕುಡಿಯ ಜನರು 100 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾಗ ರಜನಿಕಾಂತ್‌ ಎಲ್ಲಿ ಹೋಗಿದ್ದರು?’ ಎಂದು ಮತ್ತೊಬ್ಬರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ರಜನಿಗೆ ಟ್ವಿಟರ್‌ನಲ್ಲಿ ಖಾರವಾದ ಪ್ರತಿಕ್ರಿಯೆಗಳು ಬರುತ್ತಿರುವ ಬೇನ್ನಲ್ಲೆ, ಅಭಿಮಾನಿಗಳು ರಜನಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

‘ಸೂಪರ್‌ಸ್ಟಾರ್‌ ತೆರೆಯ ಹೊರಗೆ ನಟನೆ ಮಾಡಲ್ಲ. ಅವರು ರೀಲ್‌ ಹೀರೊ ಮಾತ್ರವಲ್ಲ, ರಿಯಲ್‌ ಹೀರೊ ಸಹ ಆಗಿದ್ದಾರೆ. ಅವರು ಮನದಿಂದ ಮಾತನಾಡುವ ಮೂಲಕ ಸಾಮಾನ್ಯರ ಕುರಿತು ಕಾಳಜಿ ವ್ಯಕ್ತಪಡಿಸುತ್ತಾರೆ’ ಎಂದು ಉಷಾ ನರಸಿಂಹನ್‌ ಎಂಬುವರು ರಜನಿ ಬೆಂಬಲಕ್ಕೆ ನಿಂತಿದ್ದಾರೆ.

‘ಸಮಾಜಘಾತುಕ ಶಕ್ತಿಗಳಿಂದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು ಎಂದು ರಜನಿ ಸತ್ಯವನ್ನೆ ಹೇಳಿದ್ದಾರೆ. ಆ ಮಾತಿಗೆ ಕಟಿಬದ್ಧರಾಗುವ ಮೂಲಕ ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ’ ಎಂದು ಅರವಿಂದ್ ಎಂಬುವರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry