7

ಚಿಣ್ಣರ ಡಾನ್ಸ್‌ ಶುರು...

Published:
Updated:
ಚಿಣ್ಣರ ಡಾನ್ಸ್‌ ಶುರು...

ಜೀ ಕನ್ನಡ ವಾಹಿನಿಯಲ್ಲಿ ಈ ವಾರದಿಂದ ಪ್ರತಿ ಶನಿವಾರ ಮತ್ತು ಭಾನುವಾರ ‘ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್’ ಕಾರ್ಯಕ್ರಮ ಆರಂಭವಾಗಿದೆ. ಡ್ರಾಮಾ ಜೂನಿಯರ್ಸ್, ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಜೀ ಧಾರಾವಾಹಿಯಲ್ಲಿ ನಟಿಸುತ್ತಿರುವ ಮಕ್ಕಳು ಡಾನ್ಸ್ ವೇದಿಕೆಯಲ್ಲಿ ಭರ್ಜರಿ ನೃತ್ಯದೊಂದಿಗೆ ರಂಜಿಸಲಿದ್ದಾರೆ.

ಈ ಬಾರಿಯೂ ಕೂಡ ಲಿಟಲ್ ಮಾಸ್ಟರ್ಸ್‌ನ ನಿರ್ಣಾಯಕರಾಗಿ ರಕ್ಷಿತಾ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಅವರು ಇದ್ದಾರೆ. ಲಿಟಲ್ ಚಾಂಪ್ಸ್‌ಗಳ ತರ್ಲೆ ತುಂಟಾಟಗಳಿಗೆ, ಮುದ್ದು ಮಾತುಗಳಿಗೆ ಉತ್ತರಿಸುತ್ತಾ ಕಾರ್ಯಕ್ರಮವನ್ನು ಲವಲವಿಕೆಯಿಂದ ಮುನ್ನಡೆಸುತ್ತಿರುವ ಜವಾಬ್ದಾರಿಯನ್ನು ಅನುಶ್ರೀ ಅವರೇ ವಹಿಸಿಕೊಂಡಿದ್ದಾರೆ.

ಡ್ರಾಮಾ ಜೂನಿಯರ್ಸ್‌ನಲ್ಲಿ ತಮ್ಮ ಅಭಿನಯದಿಂದ ನೋಡುಗರ ಮನ ಗೆದ್ದಿದ್ದ ಪುಟಾಣಿಗಳು, ಸರಿಗಮಪ ಲಿಟಲ್ ಚಾಂಪ್ಸ್‌ನ ಮರಿ ಕೋಗಿಲೆಗಳು ಹಾಗೂ ಜೀ ಕನ್ನಡದ ಧಾರಾವಾಹಿಯ ಮಕ್ಕಳು ಲಿಟಲ್ ಚಾಂಪ್ಸ್‌ನಲ್ಲಿ ಡಾನ್ಸ್ ಪೈಪೋಟಿ ನಡೆಸಲಿದ್ದಾರೆ.

ಈಗಾಗಲೇ ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್ ಗ್ರಾಂಡ್ ಪ್ರೀಮಿಯರ್‌ನ ಮೂಲಕ ಕಾರ್ಯಕ್ರಮಕ್ಕೆ ಒಳ್ಳೆಯ  ಓಪನಿಂಗ್ ಸಿಕ್ಕಿದೆ. ಇದು ಎರಡು ವಾರಗಳ ಕಾಲ ಶನಿವಾರ ಮತ್ತು ಭಾನುವಾರ ಸಂಜೆ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಂತರ ಪ್ರತಿ ಶನಿವಾರ ಭಾನುವಾರ ಸಂಜೆ 7.30ಕ್ಕೆ ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry