ಸರ್ವತೋಮುಖ ಅಭಿವೃದ್ಧಿಯೇ ಆದ್ಯತೆ

7

ಸರ್ವತೋಮುಖ ಅಭಿವೃದ್ಧಿಯೇ ಆದ್ಯತೆ

Published:
Updated:

ನಾನು ಮುಖ್ಯಮಂತ್ರಿಯಾದರೆ ನನ್ನ ಮೊದಲ ಆದ್ಯತೆ ಪ್ರತಿ ಹಳ್ಳಿಗೂ ಸಂಪರ್ಕ ರಸ್ತೆ, ಶುದ್ಧ ಕುಡಿಯುವ ನೀರು, ಗ್ರಂಥಾಲಯ ಹಾಗೂ ಬಡತನ ಮುಕ್ತ ರಾಜ್ಯ ನಿರ್ಮಾಣ. ರೈತ ಬೆಳೆದ ಬೆಳೆಯನ್ನು ರೈತರಿಂದಲೇ ಸರ್ಕಾರವೇ ನೇರವಾಗಿ ಖರೀದಿಸುವುದು, ನದಿ ಜೋಡಣೆಗೆ ಸೂಕ್ತ ಕಾನೂನು ರೂಪಿಸುತ್ತೇನೆ.

ಪ್ರತಿ ಹೋಬಳಿ ಮಟ್ಟದಲ್ಲೂ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ಶಾಲೆಗಳನ್ನು ತೆರೆಯುತ್ತೇನೆ. ಸರ್ಕಾರಿ ಶಾಲೆಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಿ ಉನ್ನತೀಕರಿಸುತ್ತೇನೆ. ಕ್ರೀಡಾಪಟುಗಳಿಗೆ ತರಬೇತಿ ಶಾಲೆಗಳನ್ನು ತೆರೆದು, ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗಕ್ಕೆ ಕೆಲ ನಿಯಮಗಳನ್ನು ರೂಪಿಸುತ್ತೇನೆ. ವೃದ್ಧಾಶ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ. ಭ್ರಷ್ಟಾಚಾರ ರಹಿತ ಸರ್ಕಾರದ ರಚನೆ ಸಚಿವರಿಗೆ ಕನಿಷ್ಟ ವಿದ್ಯಾರ್ಹತೆ ಜಾರಿಗೆ ತರುತ್ತೇನೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡುವುದು ಮಹಿಳೆಯರ ಸುರಕ್ಷತೆಗೆ ಸುರಕ್ಷತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇನೆ.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಜನ ಸ್ನೇಹಿ ಸರ್ಕಾರದ ನಿರ್ಮಾಣ ಮಾಡುವುದು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲ್ಟಿಸ್ಪೆಷಾಲಿಟಿ ತಂತ್ರಜ್ಞಾನ ಅಳವಡಿಸುತ್ತೇನೆ. ಜಾನುವಾರುಗಳಿಗೆ ವಿಮೆ ಸೌಲಭ್ಯ, ಹೈನುಗಾರಿಕೆಗೆ ಆದ್ಯತೆ, ಉದ್ಯೋಗ ಅರಸಿ ಗುಳೆಹೋಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ರಾಜ್ಯದೆಲ್ಲೆಡೆ ಗಿಡ, ಮರಗಳನ್ನು ನೆಡುತ್ತೇನೆ. ಜನಸ್ನೇಹಿ ಸರ್ಕಾರ ರೂಪಿಸುವುದು. ಆರ್ಥಿಕ ಪ್ರಗತಿಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸಾಧಿಸುತ್ತೇನೆ

–ಭೀಮಾನಾಯ್ಕ ಎಸ್. ಶಿರಳ್ಳಿ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry