ನಿಫಾ ವೈರಸ್‌: ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

7

ನಿಫಾ ವೈರಸ್‌: ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

Published:
Updated:
ನಿಫಾ ವೈರಸ್‌: ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆ

ಕೋಯಿಕ್ಕೋಡ್‌: ನಿಫಾ ವೈರಸ್‌ನಿಂದ ಹರಡುವ ಸೋಂಕಿಗೆ ಕೇರಳದಲ್ಲಿ ಗುರುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನದುವನ್ನೂರು ನಿವಾಸಿ ರಶೀನ್‌(25) ಎನ್ನುವವರು ಮೃತಪಟ್ಟಿದ್ದಾರೆ. ಬುಧವಾರ ಟಿ.ಪಿ. ಮಧುಸೂಧನ್‌ (55) ಮತ್ತು ಅಖಿಲ್‌ (28) ಎನ್ನುವವರು ಮೃತಪಟ್ಟಿದ್ದರು.

‘ರಾಜ್ಯದಲ್ಲಿ ಇದುವರೆಗೆ 18 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಈ ಪೈಕಿ 16 ಮಂದಿ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಫಾ ವೈರಸ್‌ ಬಗ್ಗೆ ಅನುಮಾನವಿದ್ದ 196 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ178 ಮಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry