ಕೆ.ಪಿ ನಟರಾಜ್‌ಗೆ ಕಡೆಂಗೋಡ್ಲು ಪ್ರಶಸ್ತಿ

7

ಕೆ.ಪಿ ನಟರಾಜ್‌ಗೆ ಕಡೆಂಗೋಡ್ಲು ಪ್ರಶಸ್ತಿ

Published:
Updated:
ಕೆ.ಪಿ ನಟರಾಜ್‌ಗೆ ಕಡೆಂಗೋಡ್ಲು ಪ್ರಶಸ್ತಿ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಲೇಖಕ ಡಾ. ಕೆ.ಪಿ.ನಟರಾಜ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕವನ್ನೊಳಗೊಂಡಿದೆ. ಸುಬ್ರಾಯ ಚೊಕ್ಕಾಡಿ, ಜಯರಾಮ ಕಾರಂತ, ಮುರಳೀಧರ ಉಪಾಧ್ಯ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ.ಕೆ.ಪಿ.ನಟರಾಜ್ ಅವರ ‘ನಿತ್ಯವೂ ನಿನ್ನೊಡನೆ’ ಕಾವ್ಯ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಆಗಸ್ಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry