ಗಣಿಗಾರಿಕೆ: ಸಿಪಿಐ ಅಮಾನತು

7

ಗಣಿಗಾರಿಕೆ: ಸಿಪಿಐ ಅಮಾನತು

Published:
Updated:

ಮುಂಡರಗಿ (ಗದಗ ಜಿಲ್ಲೆ): ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಆರೋಪದ ಮೇಲೆ ಮುಂಡರಗಿ ಸಿಪಿಐ ತುಕಾರಾಂ ನೀಲಗಾರ ಹಾಗೂ ನಾಲ್ವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಅಮಾನತು ಮಾಡಿದ್ದಾರೆ.

ಮಹೇಶ ಕುರ್ತಕೋಟಿ, ಉಮೇಶ, ಖಾಸೀಂ ಹಾಗೂ ಸಂಗಮೇಶ ಅಮಾನತುಗೊಂಡಿರುವ ಕಾನ್‌ಸ್ಟೆಬಲ್‌ಗಳು. ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಇವರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry