ಪುತ್ರನ ಹತ್ಯೆ, ಆತ್ಮಹತ್ಯೆ ಯತ್ನ

7

ಪುತ್ರನ ಹತ್ಯೆ, ಆತ್ಮಹತ್ಯೆ ಯತ್ನ

Published:
Updated:
ಪುತ್ರನ ಹತ್ಯೆ, ಆತ್ಮಹತ್ಯೆ ಯತ್ನ

ದೊಡ್ಡಬಳ್ಳಾಪುರ: ಕಿರುತೆರೆ ನಿರೂಪಕ ಚಂದನ್‌ (ಚಂದ್ರಶೇಖರ್‌) ಅವರ ಅಕಾಲಿಕ ಮರಣದಿಂದ ಮನನೊಂದು ಪತ್ನಿ ಮೀನಾ ತಮ್ಮ ಪುತ್ರ ತುಷಾರ್‌(13)ನನ್ನು ಕತ್ತು ಕೊಯ್ದು ಹತ್ಯೆ ಮಾಡಿ, ತಾವೂ ಆಸಿಡ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದಾವಣಗೆರೆ ಸಮೀಪ ಅಪಘಾತದಲ್ಲಿ ಚಂದನ್‌ ಮೃತರಾಗಿದ್ದರು. ಇದರಿಂದ ಅಘಾತಕ್ಕೆ ಒಳಗಾಗಿದ್ದ ಅವರು ತಂದೆ ಹಾಗೂ ಸಹೋದರನ ಜತೆ ಸೋಮೇಶ್ವರ ಬಡಾವಣೆ ಮನೆಯಲ್ಲಿ ವಾಸವಾಗಿದ್ದರು.

ಗುರುವಾರ ಬೆಳಿಗ್ಗೆ ತುಷಾರ್‌ನನ್ನು ಶಾಲೆಗೆ ಸಿದ್ಧಗೊಳಿಸಲು ತಿಳಿಸಿದ ಸಹೋದರ ಚೇತನ್‌, ಹೋಟೆಲ್‌ಗೆ ಹೋಗಿ ತಿಂಡಿ ತೆಗೆದುಕೊಂಡು ಬರುವಷ್ಟರಲ್ಲಿ ಮೀನಾ ಮಗನನ್ನು ಹತ್ಯೆ ಮಾಡಿ ಬಳಿಕ ಆಸಿಡ್‌ ಕುಡಿದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಸ್ವಸ್ಥಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಬಳಿಕ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿ, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry