ಖಾತೆ- ಕ್ಯಾತೆ

7

ಖಾತೆ- ಕ್ಯಾತೆ

Published:
Updated:

‘ರಾಷ್ಟ್ರದ ಒಳಿತಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ನಾಡಿನ ಸೇವೆಗಾಗಿ ಯಾರಿಗೆ ಯಾವ ಖಾತೆ ಸಿಕ್ಕರೂ ಜನತಾ ಸೇವೆಯ ಅವಕಾಶ ಸಿಕ್ಕಿದಂತೆ ಅಲ್ಲವೇ? ಹಾಗಿದ್ದ ಮೇಲೆ ಖಾತೆಗಾಗಿ ಯಾಕೆ ಈ ಕ್ಯಾತೆ?

ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಬರುವ

‘ಸರಕಾರ ಹರಿಗೋಲು ತೆರೆಸುಳಿಗಳತ್ತಿತ್ತ

ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು

ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು

ಉರುಳದಿಹುದಚ್ಚರಿಯೋ ಮಂಕುತಿಮ್ಮ’

ಎಂಬ ಸಾಲುಗಳು ಸಾರ್ವಕಾಲಿಕ ಸತ್ಯದಂತಿವೆ ಅಲ್ಲವೇ?

– ಅಲ್ಲಮಪ್ರಭು ಎಂ. ಎಸ್., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry