ತೂಕ ಇಳಿಕೆಗಿಂತ ಚಟುವಟಿಕೆ ಮುಖ್ಯ

7

ತೂಕ ಇಳಿಕೆಗಿಂತ ಚಟುವಟಿಕೆ ಮುಖ್ಯ

Published:
Updated:
ತೂಕ ಇಳಿಕೆಗಿಂತ ಚಟುವಟಿಕೆ ಮುಖ್ಯ

ಲಂಡನ್‌: ಹೃದಯ ಸಂಬಂಧಿ ಕಾಯಿಲೆ ಇರುವವರು ತೂಕ ಇಳಿಸಿಕೊಳ್ಳುವುದಕ್ಕಿಂತ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು.

ಹೃದ್ರೋಗಿಗಳು ತಮ್ಮ ಆರೋಗ್ಯಕ್ಕೆ ಸಮಸ್ಯೆಯಾಗದಂತೆ ತೂಕ ಹೆಚ್ಚಿಸಿಕೊಳ್ಳಬಹುದು. ಆದರೆ ಆರಾಮವಾಗಿ ಒರಗಿಕೊಳ್ಳಲು ಸಾಧ್ಯವಾಗುವ ಆಸನದಲ್ಲಿ ಕುಳಿತುಕೊಳ್ಳುವುದರಿಂದ ಗಮನಾರ್ಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಾರ್ವೆದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆ ಹೇಳಿದೆ.

ಅಧ್ಯಯನದಲ್ಲಿ ಪಾಲ್ಗೊಂಡಿದ್ದವರ ಪೈಕಿ ಸಾಮಾನ್ಯ ತೂಕ ಹೊಂದಿರುವವರು ತೂಕ ಇಳಿಸಿಕೊಂಡರೂ ಅವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದುದು ಕಂಡು ಬಂದಿತು ಎಂದು ಸಂಶೋಧಕರು ತಿಳಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿರುವ 3,307 ಜನರನ್ನು ಈ ಸಂಶೋಧನೆಗಾಗಿ ಆಯ್ಕೆ ಮಾಡಲಾಗಿತ್ತಲ್ಲದೇ, 1985ರಲ್ಲಿ ಆರಂಭಗೊಂಡ ಸಂಶೋಧನೆ 2014ರಲ್ಲಿ ಮುಕ್ತಾಯಗೊಂಡಿತ್ತು. ಈ ನಡುವೆ 1996 ಮತ್ತು 2007ರಲ್ಲಿ ಈ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry