ಅಪರೂಪದ ನ್ಯೂಟ್ರಾನ್‌ ನಕ್ಷತ್ರ ಪತ್ತೆ

7

ಅಪರೂಪದ ನ್ಯೂಟ್ರಾನ್‌ ನಕ್ಷತ್ರ ಪತ್ತೆ

Published:
Updated:
ಅಪರೂಪದ ನ್ಯೂಟ್ರಾನ್‌ ನಕ್ಷತ್ರ ಪತ್ತೆ

ವಾಷಿಂಗ್ಟನ್‌: ಕ್ಷೀರಪಥ ನಕ್ಷತ್ರಪುಂಜದ ಹೊರಗಡೆ ಇದೇ ಮೊದಲ ಬಾರಿಗೆ ಅಪರೂಪದ ನ್ಯೂಟ್ರಾನ್‌ ನಕ್ಷತ್ರವನ್ನು ಪತ್ತೆಹಚ್ಚಿರುವುದಾಗಿ ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯಿಂದ 2 ಲಕ್ಷ ಜ್ಯೋತಿರ್ವರ್ಷ ದೂರದಲ್ಲಿರುವ ಈ ನಕ್ಷತ್ರದ ಬೆರಗುಗೊಳಿಸುವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ. ನಾಸಾದ ಅತ್ಯಂತ ಶಕ್ತಿಶಾಲಿಯಾದ ದೂರದರ್ಶಕವು ಇದನ್ನು ಪತ್ತೆ ಹಚ್ಚಿದೆ.

‘ಸಾವಿರಾರು ವರ್ಷಗಳ ಹಿಂದೆ ಸಂಭವಿಸಿದ ಮಹಾಸ್ಫೋಟದ ವೇಳೆ ಇಂತಹ ನಕ್ಷತ್ರಗಳು ರೂಪುಗೊಂಡಿರಬಹುದು. ಆದರೆ ಕ್ಷೀರಪಥ ನಕ್ಷತ್ರ ಪುಂಜದ ಹೊರಗೆ ಮೊದಲ ಬಾರಿಗೆ ಕಾಣಿಸಿಕೊಂಡಿದೆ’ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.

ನ್ಯೂಟ್ರಾನ್‌ ನಕ್ಷತ್ರಗಳು ದಟ್ಟ ನಕ್ಷತ್ರಪುಂಜಗಳಾಗಿದ್ದು, ಇವು ಮಹಾಸ್ಫೋಟಕ್ಕೂ ಒಳಗಾಗುತ್ತವೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry