ಜುಲೈ 3ರವರೆಗೆ ಚಿದಂಬರಂ ಬಂಧನ ಬೇಡ: ಹೈಕೋರ್ಟ್‌

7

ಜುಲೈ 3ರವರೆಗೆ ಚಿದಂಬರಂ ಬಂಧನ ಬೇಡ: ಹೈಕೋರ್ಟ್‌

Published:
Updated:
ಜುಲೈ 3ರವರೆಗೆ ಚಿದಂಬರಂ ಬಂಧನ ಬೇಡ: ಹೈಕೋರ್ಟ್‌

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್‌  ಪಕ್ಷದ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಜುಲೈ 3ರವರೆಗೆ ಬಂಧಿಸದಂತೆ ದೆಹಲಿ ಹೈಕೋರ್ಟ್‌ ಸಿಬಿಐಗೆ ಸೂಚಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಪಾಠಕ್‌ ಅವರು, ಸಿಬಿಐ ವಿಚಾರಣೆಗೆ ಸಹಕರಿಸುವಂತೆ ಚಿದಂಬರಂ ಅವರಿಗೆ ಸೂಚಿಸಿದ್ದಾರೆ.

ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿ ಮಂಜೂರು ಮಾಡುವ ಕುರಿತು ಸಿಬಿಐ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೋರಿತು. ಈ ಬಗ್ಗೆ ವಿಚಾರಣೆಯನ್ನು ಜುಲೈ3ಕ್ಕೆ ಮುಂದೂಡಿತು.

ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ವಿರೋಧಿಸಿದರು.

₹3,500 ಕೋಟಿ ಮೊತ್ತದ ಏರ್‌ಸೆಲ್‌ ಮ್ಯಾಕ್ಸಿಸ್‌ ಮತ್ತು ₹ 305 ಕೋಟಿ ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಚಿದಂಬರಂ ಎರಡೂ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬುಧವಾರ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆಗೆ ಹಾಜರಾಗದ ಚಿದಂಬರಂ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಗುರುವಾರ ಸಿಬಿಐ ವಿಚಾರಣೆಗೆ ಹಾಜರಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry