ಎರಡನೇ ಸುತ್ತಿಗೆ ಯೂಕಿ–ದಿವಿಜ್‌

7

ಎರಡನೇ ಸುತ್ತಿಗೆ ಯೂಕಿ–ದಿವಿಜ್‌

Published:
Updated:
ಎರಡನೇ ಸುತ್ತಿಗೆ ಯೂಕಿ–ದಿವಿಜ್‌

ಪ್ಯಾರಿಸ್‌: ಭಾರತದ ಯೂಕಿ ಭಾಂಬ್ರಿ ಮತ್ತು ದಿವಿಜ್‌ ಶರಣ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಯೂಕಿ ಮತ್ತು ದಿವಿಜ್‌ 6–3, 5–7, 6–4ರಲ್ಲಿ ಭಾರತದ ಪುರವ್‌ ರಾಜಾ ಮತ್ತು ಫ್ರಾನ್ಸ್‌ನ ಫ್ಯಾಬ್ರೈಸ್‌ ಮಾರ್ಟಿನ್‌ ಅವರನ್ನು ಸೋಲಿಸಿದರು.

ಮಹಾರಾಷ್ಟ್ರ ಓಪನ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಜೊತೆಯಾಗಿ ಆಡಿ ಗಮನ ಸೆಳೆದಿದ್ದ ಯೂಕಿ ಮತ್ತು ದಿವಿಜ್‌ ಅವರು ಮೊದಲ ಸೆಟ್‌ನಲ್ಲಿ ಎದುರಾಳಿಗಳ ಮೇಲೆ ಪ್ರಾಬಲ್ಯ ಮೆರೆದರು.

ಎರಡನೇ ಸೆಟ್‌ನಲ್ಲಿ ಪುರವ್‌ ಮತ್ತು ಫ್ಯಾಬ್ರೈಸ್‌ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಯೂಕಿ ಮತ್ತು ದಿವಿಜ್‌ ಮೋಡಿ ಮಾಡಿದರು.

ತಾವು ಮಾಡಿದ ಸರ್ವ್‌ಗಳನ್ನು ಕಾಪಾಡಿಕೊಂಡ ಭಾರತದ ಜೋಡಿ ಎದುರಾಳಿಗಳ ಸರ್ವ್‌ಗಳನ್ನೂ ಮುರಿದು ಸುಲಭವಾಗಿ ಗೆಲುವಿನ ತೋರಣ ಕಟ್ಟಿತು.

ಮುಂದಿನ ಸುತ್ತಿನಲ್ಲಿ ಯೂಕಿ ಮತ್ತು ದಿವಿಜ್‌ ಅವರು ಓಲಿವರ್‌ ಮರಾಚ್‌ ಹಾಗೂ ಮೇಟ್‌ ಪೆವಿಕ್‌ ವಿರುದ್ಧ ಸೆಣಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry