ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಅಂಕ ಪಡೆದಿದ್ದ ವಿದ್ಯಾರ್ಥಿನಿ ಈಗ ಪಾಸ್‌

ಮರುಮೌಲ್ಯಮಾಪನ ಮತ್ತು ಮರು ಎಣಿಕೆ ಫಲಿತಾಂಶ ಪ್ರಕಟ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಿಯು ಮರುಮೌಲ್ಯಮಾಪನ ಹಾಗೂ ಮರು ಎಣಿಕೆಯ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಗುರುವಾರ ಪ್ರಕಟಿಸಿದೆ.

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಉತ್ತೀರ್ಣ ಭಾಗ್ಯ ದೊರೆತಿದ್ದು, ಹೆಚ್ಚು ಅಂಕ ಪಡೆದಿದ್ದ ಕೆಲವು ವಿದ್ಯಾರ್ಥಿಗಳು ಅಂಕಗಳನ್ನು ಕಳೆದು ಕೊಂಡಿರುವ ಉದಾಹರಣೆಗಳೂ ಇಲ್ಲಿವೆ.

ಸಿಇಟಿ ಫಲಿತಾಂಶ ಶುಕ್ರವಾರಪ್ರಕಟವಾಗುವುದರಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅದಕ್ಕಿಂತ ಮುಂಚಿತವಾಗಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯಶಾಸ್ತ್ರದಲ್ಲಿ 2 ಅಂಕಗಳನ್ನು ಪಡೆದಿದ್ದ ರಾಜಶ್ರೀ ಅನಂತಪುರ ಮರುಮೌಲ್ಯಮಾಪನದಿಂದ 38 ಅಂಕಗಳನ್ನು ಗಳಿಸಿ ಪಾಸ್‌ ಆಗಿದ್ದಾರೆ. ಜೀವವಿಜ್ಞಾನದಲ್ಲಿ 30 ಅಂಕಗಳನ್ನು ಪಡೆದಿದ್ದ ಅಜೇಯ್‌ 5 ಹೆಚ್ಚುವರಿ ಅಂಕಗಳನ್ನು ಪಡೆದಿದ್ದಾರೆ. ಮಂಜುನಾಥ ಶರ್ಮಾ ಎಂಬ ವಿದ್ಯಾರ್ಥಿ ಕನ್ನಡದಲ್ಲಿ 22 ಅಂಕಗಳನ್ನು ಪಡೆದಿದ್ದರು. ಈಗ 13 ಅಂಕಗಳು ಹೆಚ್ಚಿಗೆ ಬಂದಿವೆ.

ಸಮಾಜಶಾಸ್ತ್ರದಲ್ಲಿ 14 ಅಂಕಗಳನ್ನು ಪಡೆದಿದ್ದ ಸಂದೀಪ 34 ಅಂಕಗಳನ್ನು ಹೆಚ್ಚಾಗಿ ಗಳಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ 43 ಅಂಕಗಳನ್ನು ಗಳಿಸಿದ್ದ ಆಯೇಷಾಗೆ ಮರುಮೌಲ್ಯಮಾಪನದಿಂದ 38 ಅಂಕಗಳು ದೊರತಿದೆ. ವಾಣಿಜ್ಯ ವಿಷಯದಲ್ಲಿ 63 ಅಂಕಗಳನ್ನು ಪಡೆದಿದ್ದ ಮಾನಸಿಗೆ ಮರುಮೌಲ್ಯಮಾಪನದ ನಂತರ 97 ಅಂಕಗಳಾಗಿವೆ.

ಸಮಾಜಶಾಸ್ತ್ರದಲ್ಲಿ 6 ಅಂಕಗಳನ್ನು ಪಡೆದಿದ್ದ ವೈದೇಹಿಗೆ ಮರುಎಣಿಕೆಯಿಂದ ಹೆಚ್ಚುವರಿ 26 ಅಂಕಗಳು ಸಿಕ್ಕಿದ್ದರೂ ಉತ್ತೀರ್ಣರಾಗುವ ಅದೃಷ್ಟ ಒಲಿದಿಲ್ಲ.  ಕನ್ನಡದಲ್ಲಿ 62 ಅಂಕಗಳನ್ನು ಪಡೆದಿದ್ದ ಅಕ್ಷಯ್‌ಗೆ ಮರು ಎಣಿಕೆಯಲ್ಲಿ 26 ಅಂಕಗಳು ಹೆಚ್ಚಿಗೆ ದೊರೆತಿವೆ. ಗಣಿತದಲ್ಲಿ 97 ಅಂಕಗಳನ್ನು ಪಡೆದಿದ್ದ ಶ್ರೇಯಾಗೆ ಮರು ಎಣಿಕೆಯಿಂದ ನೂರಕ್ಕೆ ನೂರು ಅಂಕಗಳು ಲಭಿಸಿದೆ. ಸಂಗಬಸವ ಎನ್ನುವ ವಿದ್ಯಾರ್ಥಿಗೆ ಗಣಿತದಲ್ಲಿ ಕೇವಲ 24 ಅಂಕಗಳು ಸಿಕ್ಕಿದ್ದು, ಮರು ಎಣಿಕೆಯಿಂದ ಹೆಚ್ಚುವರಿ 22 ಅಂಕಗಳು ಬಂದಿವೆ.

ಇದಕ್ಕೆ ತದ್ವಿರುದ್ಧವಾಗಿ ಮರುಮೌಲ್ಯಮಾಪನ ಹಾಗೂ ಮರು ಎಣಿಕೆಯಿಂದ ಅಂಕಗಳನ್ನು ಕಳೆದುಕೊಂಡು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಇದ್ದಾರೆ. ರಸಾಯನವಿಜ್ಞಾನದಲ್ಲಿ 38 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದ ಪ್ರದ್ಯುಮ್ನ ಐದು ಅಂಕಗಳನ್ನು ಕಳೆದುಕೊಂಡಿದ್ದಾರೆ. ರಸಾಯನ ವಿಜ್ಞಾನದಲ್ಲಿ 35 ಅಂಕಗಳನ್ನು ಪಡೆದು ಪಾಸಾಗಿದ್ದ ಸಂಜನಾ ಒಂದು ಅಂಕಗಳನ್ನು ಕಳೆದುಕೊಂಡು ಅನುತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT