ಯುವಕನನ್ನು ನಗ್ನವಾಗಿಸಿ ಲೈಂಗಿಕ ದೌರ್ಜನ್ಯ

7
ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್‌

ಯುವಕನನ್ನು ನಗ್ನವಾಗಿಸಿ ಲೈಂಗಿಕ ದೌರ್ಜನ್ಯ

Published:
Updated:
ಯುವಕನನ್ನು ನಗ್ನವಾಗಿಸಿ ಲೈಂಗಿಕ ದೌರ್ಜನ್ಯ

ಬೆಂಗಳೂರು: ಯುವಕನನ್ನು ನಗ್ನವಾಗಿಸಿ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ, ಆಟೊ ಚಾಲಕ ಎಚ್‌.ಟಿ.ರಾಜೇಶ್‌ ಅಲಿಯಾಸ್‌ ಹುಲಿ (30) ಎಂಬಾತನನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೇಲುಕೋಟೆ ಸಮೀಪದ ಹೊಸಕೋಟೆಯ ರಾಜೇಶ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪತ್ನಿ ಹಾಗೂ ಮಗುವಿನ ಜತೆ ಇಟ್ಟಮಡುವಿನಲ್ಲಿ ವಾಸವಿದ್ದ. ಸಂತ್ರಸ್ತ 19 ವರ್ಷದ ಯುವಕ ನೀಡಿದ ದೂರಿನನ್ವಯ ಸಲಿಂಗ ಕಾಮ (ಐಪಿಸಿ 377) ಆರೋಪದಡಿ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆತ, ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಸ್ಥಳೀಯ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಯುವಕ, ಕಚೇರಿಯ ಕೊಠಡಿಯಲ್ಲೇ ನೆಲೆಸಿದ್ದಾನೆ.

ಮೇ 23ರಂದು ಸಂಜೆ ಕೆಲಸ ಮುಗಿದ ನಂತರ, ಸ್ನೇಹಿತನನ್ನು ಭೇಟಿಯಾಗಲೆಂದು ರಾತ್ರಿ 7 ಗಂಟೆಗೆ ಹೊರಟಿದ್ದ. ಕಚೇರಿ ಬಳಿಯೇ ನಿಂತಿದ್ದ ರಾಜೇಶ್‌ನ ಆಟೊ ಹತ್ತಿದ್ದ.

ಇಟ್ಟಮಡುವಿನಲ್ಲಿದ್ದ ತನ್ನ ಮನೆ ಕಡೆಗೆ ಆಟೊ ಚಲಾಯಿಸಿಕೊಂಡು ಹೋಗಿದ್ದ ಆರೋಪಿ, ‘ಬಟ್ಟೆ ಗಲೀಜಾಗಿದೆ. ಬದಲಾಯಿಸಿಕೊಂಡು ಬರುತ್ತೇನೆ’ ಎಂದು ಹೇಳಿ 4ನೇ ಮಹಡಿಯಲ್ಲಿದ್ದ ಮನೆಗೆ ತೆರಳಿದ್ದ. ನಂತರ, ಯುವಕನಿಗೂ ಮನೆಯೊಳಗೆ ಬರುವಂತೆ ಕರೆದಿದ್ದ. ಯುವಕ ಮನೆಯೊಳಗೆ ಹೋದಾಗ ಆರೋಪಿ ನಗ್ನವಾಗಿ ನಿಂತುಕೊಂಡಿದ್ದ. ಗಾಬರಿಗೊಂಡ ಯುವಕ, ಹೊರಗೆ ಓಡಿ ಹೋಗಲು ಯತ್ನಿಸಿದ್ದ. ಆತನನ್ನು ಹಿಡಿದುಕೊಂಡಿದ್ದ ಆರೋಪಿ, ಬಾಗಿಲು ಬಂದ್‌ ಮಾಡಿದ್ದ. ನಂತರ, ಯುವಕನ ಬಾಯಿಗೆ ಬಟ್ಟೆ ಕಟ್ಟಿದ್ದ. ಅದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಂತೆ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ನಂತರ, ಹಾಸಿಗೆ ಮೇಲೆ ಯುವಕನನ್ನು ಮಲಗಿಸಿ ಬಟ್ಟೆಗಳನ್ನು ಬಿಚ್ಚಿ ನಗ್ನಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದರು.

ಒಂದು ಗಂಟೆ ಬಳಿಕ ಯುವಕನನ್ನು ಕಚೇರಿ ಬಳಿ ಬಿಟ್ಟುಹೋಗಿದ್ದ ಆರೋಪಿ, ‘ದೃಶ್ಯವನ್ನು ವಿಡಿಯೊ ಮಾಡಿದ್ದೇನೆ. ಯಾರಿಗಾದರೂ ಹೇಳಿದರೆ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದ. ಘಟನೆ ಬಗ್ಗೆ ಸಂತ್ರಸ್ತ, ತನ್ನ ಕಚೇರಿಯ ಮಾಲೀಕರಿಗೆ ತಿಳಿಸಿದ್ದ. ನಂತರವೇ ಠಾಣೆಗೆ ಬಂದು ದೂರು ನೀಡಿದ್ದ ಎಂದರು.

ಊರಿಗೆ ಹೋಗಿದ್ದ ಪತ್ನಿ: ಆರೋಪಿಯ ಪತ್ನಿ ಇತ್ತೀಚೆಗಷ್ಟೇ ಮಗುವಿನ ಸಮೇತ ಊರಿಗೆ ಹೋಗಿದ್ದರು. ಅಂದಿನಿಂದ ಆರೋಪಿ ಒಬ್ಬನೇ ಮನೆಯಲ್ಲಿದ್ದ ಕೃತ್ಯ ಎಸಗಿದ್ದನ್ನು ಆರಂಭದಲ್ಲಿ ಆರೋಪಿ ಒಪ್ಪಿಕೊಂಡಿರಲಿಲ್ಲ. ಮನೆಯಲ್ಲಿ ಪರಿಶೀಲನೆ ನಡೆಸಿ ಕೆಲ ಪುರಾವೆಗಳನ್ನು ಸಂಗ್ರಹಿಸಿ ತೋರಿಸಿದಾಗ ಒಪ್ಪಿಕೊಂಡ ಇದೇ ಮೊದಲ ಬಾರಿಗೆ ಇಂಥ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry