7

ಬಿಡಿಎ: 10 ಹೊಸ ಕಾರು ಖರೀದಿಗೆ ಒಪ್ಪಿಗೆ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿಪ‍್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗಾಗಿ 10 ಹೊಸ ಕಾರುಗಳನ್ನು ಖರೀದಿಸಲು ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

‘ಪ್ರಾಧಿಕಾರದ ಉನ್ನತಾಧಿಕಾರಿಗಳು ಬಳಸುತ್ತಿರುವ ವಾಹನಗಳು ಹಳೆಯದಾಗಿವೆ. ಇದರಿಂದ ದೈನಂದಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರು
ತ್ತಿದೆ. ಆಯುಕ್ತರು, ಆರ್ಥಿಕ ಸದಸ್ಯರು,ನಗರ ಯೋಜನಾ ಸದಸ್ಯರು, ಕಾರ್ಯದರ್ಶಿಗಳು, ಎಂಜಿನಿಯರಿಂಗ್‌ ಅಧಿಕಾರಿಗಳು, ಭೂಸ್ವಾಧೀನಾಧಿಕಾರಿಗಳಿಗೆ ಕಚೇರಿ ಕಾರ್ಯಕ್ಕೆ ಉಪಯೋಗಿಸಲು ಸುಸಜ್ಜಿತ ವಾಹನಗಳ ಅವಶ್ಯಕತೆ ಇದೆ. ಹೀಗಾಗಿ 10 ಕಾರುಗಳ ಖರೀದಿಗೆ ಅನುಮತಿ ನೀಡಬೇಕು’ ಎಂದು ಸಭೆಯಲ್ಲಿ ಆರ್ಥಿಕ ಸದಸ್ಯರು ಪ್ರಸ್ತಾವ ಸಲ್ಲಿಸಿದ್ದರು. ‘ಹಳೆಯ ಕಾರುಗಳನ್ನು ಅವಶ್ಯಕತೆ ಇರುವ ಅಧಿಕಾರಿಗಳಿಗೆ ನಿಯೋಜಿಸಲಾಗುತ್ತದೆ’ ಎಂದೂ ಪ್ರಸ್ತಾವದಲ್ಲಿ ತಿಳಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry