ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

7

ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

Published:
Updated:
ಮುಖಾಮುಖಿ ಡಿಕ್ಕಿ: ನಾಲ್ವರು ಸಾವು

ಯಾದಗಿರಿ: ಜೀಪ್ ಮತ್ತು ಕಲ್ಲಿದ್ದಲು ಬೂದಿ ಸಾಗಿಸುತ್ತಿದ್ದ ಲಾರಿ ಮಧ್ಯೆ ಗುರುವಾರ ತಡರಾತ್ರಿ ಸಮೀಪದ ಮುಂಡರಗಿ ಗ್ರಾಮದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಯಾದಗಿರಿ ನಗರ ನಿವಾಸಿಗಳಾದ ಜಾನ್ ಪಾಲ್ (35), ಸ್ಟೀಫನ್ ಪೀಟರ್ (10), ಎಲಿಜಬೆತ್ (40), ಬಸವರಾಜ್(23) ಎಂದು ಗುರುತಿಸಲಾಗಿದೆ.

ಮೃತರು ಸಮೀಪದ ಗಾಜರಕೋಟ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಯಾದಗಿರಿಗೆ ಹಿಂದಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಗರ ಸಿಪಿಐ ಮೌನೇಶ್ವರ ಪಾಟೀಲ ಶುಕ್ರವಾರ ಬೆಳಿಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry