4
ರೈತರಿಗೆ ಸ್ಪಂದಿಸದ ಸರ್ಕಾರ: ದಯಾನಂದ ಸಿ. ಪಾಟೀಲ ಆರೋಪ

ತೊಗರಿ ಬಾಕಿ ಹಣ ನೀಡಲು ಆಗ್ರಹ

Published:
Updated:

ಯಾದಗಿರಿ: ಹೈದರಾಬಾದ್ ಕರ್ನಾಟಕ ಭಾಗದ ರೈತರಿಂದ ತೊಗರಿ ಖರೀದಿಸಿರುವ ಸರ್ಕಾರ, ಬಿತ್ತನೆ ಸಮಯ ಸಮೀಪಿಸಿದರೂ ಖರೀದಿ ಬಾಕಿ ಹಣ ನೀಡದೆ ರೈತರನ್ನು ಸತಾಯಿಸುತ್ತಿದೆ. ಕೂಡಲೇ ಬಾಕಿ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಹೈದರಾಬಾದ್ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಸಿ. ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗದ ರೈತರಿಂದ ಒಟ್ಟು 9ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿದೆ.ಅದರ ಒಟ್ಟು ಮೌಲ್ಯ ₹ 630 ಕೋಟಿ ಆಗುತ್ತದೆ. ಆದರೆ, ಸರ್ಕಾರ ಇದುವರೆಗೂ ಕೇವಲ ₹ 400 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ₹ 230 ಕೋಟಿ ಬಾಕಿಯನ್ನು ಮುಂಗಾರು ಬಿತ್ತನೆ ಸಮಯ ಬಂದರೂ ರೈತರಿಗೆ ನೀಡಿಲ್ಲ. ಇದರಿಂದಾಗಿ ಸರ್ಕಾರವನ್ನು ನಂಬಿ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಿದ ರೈತರು ಬಿತ್ತನೆಗಾಗಿ ಸಾಲಗಾರರಾ →ಗುವಂತಾಗಿದೆ’ →ಎಂದು ಸರ್ಕಾರದ →ವಿರುದ್ಧ ಅಸಮಾಧಾನ →ವ್ಯಕ್ತಪಡಿಸಿದರು.

‘ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಸುರಿದಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಿದೆ. ಆದರೆ, ಗೊಬ್ಬರ, ಬಿತ್ತನೆ ಬೀಜ, ಕೃಷಿ ವೆಚ್ಚಕ್ಕಾಗಿ ಹಣವಿಲ್ಲದೇ ರೈತರು ಪರದಾಡುವಂತಾಗಿದೆ. ಇದರಿಂದ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದರು.

‘ಸಾಲಮನ್ನಾ ಮಾಡುವ ಮನಸ್ಸು ಯಾವ ಸರ್ಕಾರಗಳಿಗೂ ಇಲ್ಲ. ಹಿಂದಿದ್ದ ಕಾಂಗ್ರೆಸ್‌ ಸರ್ಕಾರ ಕೂಡ ₹ 50 ಸಾವಿರದವರೆಗೆ ಕೃಷಿ ಸಾಲಮನ್ನಾ ಘೋಷಿಸಿತ್ತು. ಆದರೆ, ನಿಜವಾಗಿ ಯಾವ ರೈತರ ಸಾಲವೂ ಮನ್ನಾ ಆಗಿಲ್ಲ. ಈ ಕುರಿತು ಬ್ಯಾಂಕ್‌ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಾಲಮನ್ನಾ ಕುರಿತು ಸರ್ಕಾರದಿಂದ ಆದೇಶ ಪತ್ರ ಬಂದಿಲ್ಲ ಎನ್ನುತ್ತಾರೆ. ಸಬೂಬು, ಸುಳ್ಳ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರನ್ನು ವಂಚಿಸಿದೆ’ ಎಂದು ಕಿಡಿಕಾರಿದರು.

‘ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಡಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ರೈತರಿಗೆ ತಲುಪಿಲ್ಲ. ರೈತರನ್ನು ಅಧಿಕಾರಿಗಳು ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಸರ್ಕಾರ ಸೌಲಭ್ಯವನ್ನು ಪ್ರಾಮಾಣಿಕವಾಗಿ ರೈತ ಫಲಾನುಭವಿಗಳಿಗೆ ತಲುಪಿಸಬೇಕು. ಗೌರವದಿಂದ ಕಾಣಬೇಕು. ಅಧಿಕಾರಿಗಳ ನಡೆ ಬದಲಾಗದಿದ್ದರೆ ಜಿಲ್ಲೆಯಲ್ಲಿ ಉಗ್ರ ರೈತ ಚಳವಳಿ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

**

ಕೃಷಿಗೆ ಸಂಬಂಧಿಸಿದ ಯಾವ ಸಭೆಗಳಿಗೂ ಜಿಲ್ಲಾಧಿಕಾರಿ ರೈತರನ್ನು ಆಹ್ವಾನಿಸುತ್ತಿಲ್ಲ. ಇದರಿಂದ ಸರ್ಕಾರದ ಯಾವ ಮಾಹಿತಿಯೂ ರೈತರಿಗೆ ಸಿಗುತ್ತಿಲ್ಲ

ದುರ್ಗಣ್ಣ ಹಪ್ಪಳ, ಜಿಲ್ಲಾ ಘಟಕ ಅಧ್ಯಕ್ಷ ಹೈದರಾಬಾದ್ ಕರ್ನಾಟಕ ರೈತ ಸಂಘ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry