ಪೋಷಕರನ್ನು ಪತ್ತೆ ಮಾಡಿ

7

ಪೋಷಕರನ್ನು ಪತ್ತೆ ಮಾಡಿ

Published:
Updated:

‘ಮೈಸೂರು ಜಿಲ್ಲೆಯಲ್ಲಿ ಏಳು ವರ್ಷಗಳಲ್ಲಿ 1,491 ಮಕ್ಕಳು ನಾಪತ್ತೆಯಾಗಿದ್ದು, ಅವರಲ್ಲಿ 115 ಮಕ್ಕಳನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ’ (ಪ್ರ. ವಾ., ಜೂನ್‌ 1) ಎಂದು ವರದಿಯಾಗಿದೆ.

ಮೈಸೂರಿನ ಜನನಿಬಿಡ ವೃತ್ತಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಪುಟ್ಟ ಪುಟ್ಟ ಮಕ್ಕಳ ಸಂಖ್ಯೆ ಈಗ ಕಡಿಮೆಯಾಗಿದೆ. ಆದರೆ ಅನೇಕ ಮಕ್ಕಳು ಈಗ ಕೈಗಳಲ್ಲಿ ಉದ್ದುದ್ದಪೆನ್ನುಗಳನ್ನು ಹಿಡಿದು, ಸಿಗ್ನಲ್ ಲೈಟ್‌ಗಳಿರುವ ಸ್ಥಳಗಳಲ್ಲಿಮಾರಾಟ ಮಾಡುತ್ತಿದ್ದಾರೆ. ಸಾರ್ವಜನಿಕರು ಕನಿಕರದಿಂದ ಈ ಮಕ್ಕಳ ಕೈಗೆ ಹತ್ತು ರೂಪಾಯಿ ನೀಡಿ ಪೆನ್ ಕೊಳ್ಳುತ್ತಿದ್ದಾರೆ. ಭಿಕ್ಷೆ ಬೇಡುವ ಮಕ್ಕಳ ಕೈಗೆ ಪೆನ್ ಕೊಟ್ಟು ಇವರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಖದೀಮರ ವಿಚಾರವಾಗಿ ಪೊಲೀಸರಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಮಕ್ಕಳು ಅಂಗಲಾಚುವ ದೃಶ್ಯ ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ.

ಇಂತಹ ಮಕ್ಕಳನ್ನು ಹಿಂಬಾಲಿಸಿ ಆ ಮಕ್ಕಳಿಂದ ಲಾಭ ಪಡೆಯುತ್ತಿರುವ ದುಷ್ಟರನ್ನು ಪತ್ತೆ ಹಚ್ಚುವುದರ ಜೊತೆಗೆ ಅಂತಹ ಮಕ್ಕಳ ಪೋಷಕರನ್ನು ಪತ್ತೆಮಾಡಿ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸುವ ಕೆಲಸ ಆಗಬೇಕು. ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಶಕ್ಕಾದರೂ ಅವರನ್ನು ಒಪ್ಪಿಸಬೇಕು.

-ಪಿ.ಜೆ. ರಾಘವೇಂದ್ರ, ಮೈಸೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry