‘ಮೋದಿ ಸರ್ಕಾರ ತೃಪ್ತಿ ತಂದಿಲ್ಲ’

7

‘ಮೋದಿ ಸರ್ಕಾರ ತೃಪ್ತಿ ತಂದಿಲ್ಲ’

Published:
Updated:
‘ಮೋದಿ ಸರ್ಕಾರ ತೃಪ್ತಿ ತಂದಿಲ್ಲ’

ಉಡುಪಿ: ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ನಿರೀಕ್ಷಿತ ಮಟ್ಟದಲ್ಲಿ ತೃಪ್ತಿ ತಂದಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣವಾದರೂ ವಿದೇಶಗಳಿಂದ ಕಪ್ಪುಹಣ ಹೊರತರದಿರುವುದು ಹಾಗೂ ಗಂಗಾ ಶುದ್ಧೀಕರಣ ಆಗದಿರುವುದು ಮೋದಿ ಸರ್ಕಾರಕ್ಕೆ ಹಿನ್ನಡೆ ಎಂದರು.

ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಎಲ್ಲ ಭರವಸೆ ಈಡೇರಿಸದಿರುವುದು ಹಾಗೂ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕಿಂತಲೂ, ಗಂಗಾ ನದಿಯ ಶುದ್ಧೀಕರಣ ಇಂದಿನ ಅಗತ್ಯ ಎಂದು ಶ್ರೀಗಳು ಒತ್ತಿ ಹೇಳಿದರು.

ರಾಜ್ಯ ರಾಜಕೀಯ ಬೇಸರ ತರಿಸಿದೆ: ರೆಸಾರ್ಟ್‌ ರಾಜಕಾರಣ, ಅಸಭ್ಯ ಪದಗಳ ಬಳಕೆ, ಹಣದ ಆಮಿಷವೊಡ್ಡಿ ಎಲ್ಲರೂ ರಾಜಕೀಯ ಕ್ಷೇತ್ರವನ್ನು ವಿಕೃತಗೊಳಿಸುತ್ತಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry