ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ವೇಗದ ದಾಳಿಗೆ ಕಂಗೆಟ್ಟ ಪಾಕ್‌

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಲೀಡ್ಸ್‌: ಜೇಮ್ಸ್‌ ಆ್ಯಂಡರ್‌ಸನ್ (43ಕ್ಕೆ3) ಮತ್ತು ಸ್ಟುವರ್ಟ್‌ ಬ್ರಾಡ್‌ (38ಕ್ಕೆ3) ಅವರ ವೇಗದ ದಾಳಿಗೆ ಕಂಗೆಟ್ಟ ಪಾಕಿಸ್ತಾನ ತಂಡ ಇಂಗ್ಲೆಂಡ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ.

ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಪ್ರಥಮ ಇನಿಂಗ್ಸ್‌ನಲ್ಲಿ 48.1 ಓವರ್‌ಗಳಲ್ಲಿ 174ರನ್‌ಗಳಿಗೆ ಆಲೌಟ್‌ ಆಯಿತು.

ಬ್ಯಾಟಿಂಗ್‌ ಆರಂಭಿಸಿದ ಸರ್ಫರಾಜ್‌ ಪಡೆ ರನ್‌ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಳೆದುಕೊಂಡಿತು. ಎರಡನೇ ಓವರ್‌ ಬೌಲ್‌ ಮಾಡಿದ ಸ್ಟುವರ್ಟ್‌ ಬ್ರಾಡ್‌ ಕೊನೆಯ ಎಸೆತದಲ್ಲಿ ಇಮಾಮ್‌ ಉಲ್‌ ಹಕ್‌ಗೆ (0) ಪೆವಿಲಿಯನ್‌ ದಾರಿ ತೋರಿಸಿದರು.

ಅಜರ್‌ ಅಲಿ (2), ಉಸ್ಮಾನ್‌ ಸಲಾಹುದ್ದೀನ್‌ (4) ಕೂಡ ಬೇಗನೆ ಔಟಾದರು. ಈ ಹಂತದಲ್ಲಿ ಹ್ಯಾರಿಸ್‌ ಸೋಹೆಲ್‌ (28; 57ಎ, 4ಬೌಂ) ಮತ್ತು ಅಸಾದ್‌ ಶಫಿಕ್‌ (27; 48ಎ, 5ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು.

ಶಾದಬ್‌ ಖಾನ್‌ (56; 52ಎ, 10ಬೌಂ) ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಏಕದಿನ ಮಾದರಿಯನ್ನು ನೆನಪಿಸುವಂತೆ ಬ್ಯಾಟ್‌ ಬೀಸಿದ ಅವರು ತಂಡ 170ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: ಮೊದಲ ಇನಿಂಗ್ಸ್‌: 48.1 ಓವರ್‌ಗಳಲ್ಲಿ 174 (ಹ್ಯಾರಿಸ್‌ ಸೋಹೆಲ್‌ 28, ಅಸಾದ್‌ ಶಫಿಕ್‌ 27, ಸರ್ಫರಾಜ್‌ ಅಹ್ಮದ್‌ 14, ಶಾದಬ್‌ ಖಾನ್‌ 56, ಮೊಹಮ್ಮದ್‌ ಅಮೀರ್‌ 13, ಹಸನ್‌ ಅಲಿ 24; ಜೇಮ್ಸ್‌ ಆ್ಯಂಡರ್‌ಸನ್‌ 43ಕ್ಕೆ3, ಸ್ಟುವರ್ಟ್‌ ಬ್ರಾಡ್‌ 38ಕ್ಕೆ3, ಕ್ರಿಸ್‌ ವೋಕ್ಸ್‌ 55ಕ್ಕೆ3, ಟಾಮ್‌ ಕರನ್‌ 33ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT