ಸರ್ಫಿಂಗ್ ರದ್ದು

7

ಸರ್ಫಿಂಗ್ ರದ್ದು

Published:
Updated:

ಮಂಗಳೂರು: ಮಂತ್ರ ಸರ್ಫ್‌ ಕ್ಲಬ್‌ ಮತ್ತು ಕೆನರಾ ಸರ್ಫಿಂಗ್‌ ಆಂಡ್‌ ವಾಟರ್‌ ಪ್ರಮೋಷನ್‌ ಕೌನ್ಸಿಲ್‌ ಸಹಯೋಗದಲ್ಲಿ ಇದೇ 2 ರಿಂದ ಆರಂಭವಾಗಬೇಕಿದ್ದ ಚೊಚ್ಚಲ ಆವೃತ್ತಿಯ ಮಾನ್ಸೂನ್‌ ಸರ್ಫ್‌ ಚಾಲೆಂಜ್‌ ಟೂರ್ನಿಯನ್ನು ಜಿಲ್ಲಾಡಳಿತ ರದ್ದುಪಡಿಸಿದೆ.

‘ಚಂಡಮಾರುತ ಹಾಗೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಟೂರ್ನಿಯನ್ನು ಮುಂದೂಡಲಾಗಿದೆ’ ಎಂದು ಕೆನರಾ ಸರ್ಫಿಂಗ್ ಆಂಡ್ ವಾಟರ್‌ ಪ್ರಮೋಷನ್‌ ಕೌನ್ಸಿಲ್‌ನ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

‘ಬಹಳಷ್ಟು ಸರ್ಫಿಂಗ್‌ ಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸುವ ಉತ್ಸಾಹ ತೋರಿದ್ದಾರೆ. ಮುಂದಿನ ಮುಂಗಾರಿನಲ್ಲಿ ಮತ್ತೊಮ್ಮೆ ಟೂರ್ನಿ ಆಯೋಜಿಸಲಾಗುವುದು’ ಎಂದು ಮಂತ್ರ ಸರ್ಫ್‌ ಕ್ಲಬ್‌ ಸದಸ್ಯ ರಾಮಮೋಹನ್‌ ಪರಾಂಜಪೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry