ಕ್ರಿಕೆಟ್‌ ಬೆಟ್ಟಿಂಗ್‌ ಹಗರಣ: ನಟ ಅರ್ಬಾಜ್ ಖಾನ್‌ಗೆ ಸಮನ್ಸ್‌

7

ಕ್ರಿಕೆಟ್‌ ಬೆಟ್ಟಿಂಗ್‌ ಹಗರಣ: ನಟ ಅರ್ಬಾಜ್ ಖಾನ್‌ಗೆ ಸಮನ್ಸ್‌

Published:
Updated:
ಕ್ರಿಕೆಟ್‌ ಬೆಟ್ಟಿಂಗ್‌ ಹಗರಣ: ನಟ ಅರ್ಬಾಜ್ ಖಾನ್‌ಗೆ ಸಮನ್ಸ್‌

ಠಾಣೆ, ಮಹಾರಾಷ್ಟ್ರ: ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ಸಹೋದರ ನಟ, ನಿರ್ಮಾಪಕ ಅರ್ಬಾಜ್ ಖಾನ್‌ಗೆ ಠಾಣೆ ಪೊಲೀಸರು ಶುಕ್ರವಾರ ಸಮನ್ಸ್ ಜಾರಿ ಮಾಡಿದ್ದಾರೆ.

ಅರ್ಬಾಜ್ ಖಾನ್ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದು, ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇರುವುದರಿಂದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಶನಿವಾರ ಅವರಿಂದ ಹೇಳಿಕೆ ಪಡೆಯಲಾಗುತ್ತದೆ.

ಐಪಿಎಲ್‌ನ 11ನೇ ಆವೃತ್ತಿಯ ಸಂದರ್ಭದಲ್ಲಿ ಬುಕ್ಕಿಗಳ ಮೂಲಕ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಮೇ 16ರಂದು ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದ್ದ ವೇಳೆ ಠಾಣೆಯ ಅಪರಾಧ ವಿಭಾಗದ ತಂಡ ದಾಳಿ ನಡೆಸಿತ್ತು. ಇದಾದ ಬಳಿಕ ಕೆಲವರನ್ನು ಬಂಧಿಸಲಾಗಿತ್ತು. 

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಈಚೆಗೆ ಮುಂಬೈ ನಿವಾಸಿಯಾದ ಜಲಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ

ಹಾಜರುಪಡಿಸಲಾಗಿತ್ತು. ಆತ ನೀಡಿದ ಮಾಹಿತಿ ಆಧರಿಸಿ ಅರ್ಬಾಜ್‌ ಖಾನ್‌ಗೆ ಸಮನ್ಸ್‌ ಜಾರಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry