ಸಿಬಿಎಸ್‌ಇ: ಚೈತನ್ಯ ಸಂಸ್ಥೆ ಉತ್ತಮ ಸಾಧನೆ

7

ಸಿಬಿಎಸ್‌ಇ: ಚೈತನ್ಯ ಸಂಸ್ಥೆ ಉತ್ತಮ ಸಾಧನೆ

Published:
Updated:

ಬೆಂಗಳೂರು: ಸಿಬಿಎಸ್‌ಇ ‌(10ನೇ ತರಗತಿ) ಪರೀಕ್ಷೆಯಲ್ಲಿ ಚೈತನ್ಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ ಎಂದು ಚೈತನ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕಿ ಸೀಮಾ ತಿಳಿಸಿದರು.

ವಿದ್ಯಾರಣ್ಯಪುರದ ಚೈತನ್ಯ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ಸಂಸ್ಥೆಯ ಶಾಖೆಗಳ ಪೈಕಿ 5 ವಿದ್ಯಾರ್ಥಿಗಳು 490ಕ್ಕಿಂತ ಹೆಚ್ಚು, 103 ವಿದ್ಯಾರ್ಥಿಗಳು 475ಕ್ಕಿಂತ ಹೆಚ್ಚು, 517 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಹಾಗೂ 1,375 ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದರು.

ಗಣಿತ ವಿಷಯದಲ್ಲಿ 1,754 ಮತ್ತು ವಿಜ್ಞಾನ ವಿಷಯದಲ್ಲಿ 1,650 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9,189 ವಿದ್ಯಾರ್ಥಿಗಳು ‘ಎ’ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದರು.

ಸಂಸ್ಥಾಪನಾ ಅಧ್ಯಕ್ಷ ಡಾ. ಬಿ.ಎಸ್.ರಾವ್, ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry