ಪರೀಕ್ಷೆಗೆ 'ಹಿಂಗ್ಲಿಷ್‍'ನಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ

7

ಪರೀಕ್ಷೆಗೆ 'ಹಿಂಗ್ಲಿಷ್‍'ನಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ

Published:
Updated:
ಪರೀಕ್ಷೆಗೆ 'ಹಿಂಗ್ಲಿಷ್‍'ನಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ

ಜಬಲ್‍ಪುರ್: ವಿದ್ಯಾರ್ಥಿಗಳು ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಹಿಂಗ್ಲಿಷ್ (ಹಿಂದಿ+ಇಂಗ್ಲಿಷ್) ಬಳಸಬಹುದು ಎಂದು ಮಧ್ಯ ಪ್ರದೇಶ ವೈದ್ಯಕೀಯ ವಿಶ್ವವಿದ್ಯಾನಿಲಯ (ಎಂಪಿಎಂಎಸ್‍ಯು) ಹೇಳಿದೆ.

ಪರೀಕ್ಷಾ ಮಂಡಳಿ ಜತೆ ಸುದೀರ್ಘವಾಗಿ ಚರ್ಚಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಇಂಗ್ಲಿಷ್, ಹಿಂದಿ ಅಥವಾ ಹಿಂಗ್ಲಿಷ್‍ನಲ್ಲಿ ಉತ್ತರಿಸಬಹುದು ಎಂದು ವಿಶ್ವವಿದ್ಯಾನಿಲಯ ಮೇ.26ರಂದು ಸುತ್ತೋಲೆ ಹೊರಡಿಸಿದೆ.

ಗ್ರಾಮೀಣ ಪ್ರದೇಶದಿಂದ ಬಂದು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಗಾಗಿದೆ ಎಂದು ವಿಶ್ವವಿದ್ಯಾನಿಲಯದ ಉಪ ಕುಲಪತಿ ಆರ್‌ ಎಸ್ ಶರ್ಮಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಉದಾಹರಣೆಗೆ ಪರೀಕ್ಷೆಯಲ್ಲಿ 'heart attack’ ಎಂದು ಬರೆಯುವ ಬದಲು 'hart ka daura’  ಎಂದು ಬರೆಯಬಹುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಉತ್ತರ ಗೊತ್ತಿದ್ದರೂ ಇಂಗ್ಲಿಷ್ ಬರದೇ ಇರುವ ಕಾರಣ ಅವರಿಗೆ ಉತ್ತರ ಬರೆಯಲು  ಕಷ್ಟವಾಗುತ್ತದೆ. ಹಾಗಾಗಿ ಹಿಂಗ್ಲಿಷ್‍ನಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಎಂಬಿಬಿಎಸ್, ಆಯುರ್ವೇದಿಕ್ ಮೆಡಿಸಿನ್ ಮತ್ತು ನರ್ಸಿಂಗ್ ವಿಷಯಗಳನ್ನು ಕಲಿಸುವ 312 ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧೀನದಲ್ಲಿದೆ. ಜುಲೈ ಮತ್ತು ಜನವರಿ ತಿಂಗಳಲ್ಲಿ ಪರೀಕ್ಷೆ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry