ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಾಘವಾಂಕುರಗೆ ಅಗಸನಕಟ್ಟೆ ಕಥಾ ಪ್ರಶಸ್ತಿ

Last Updated 2 ಜೂನ್ 2018, 5:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಕ್ಷರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆಯಲ್ಲಿ ರಟ್ಟಿಹಳ್ಳಿಯ ರಾಘವಾಂಕುರ ಅವರ ‘ಕಳೆದುಕೊಂಡವರು’ ಕತೆ ಬಹುಮಾನಕ್ಕೆ ಪಾತ್ರವಾಗಿದೆ. ಪ್ರಶಸ್ತಿಯು ₹ 5, 000 ನಗದು ಹಾಗೂ ಫಲಕ ಒಳಗೊಂಡಿದೆ. ಕತೆಗಾರ್ತಿ ಸುನಂದಾ ಕಡಮೆ ಹಾಗೂ ಹಿರಿಯ ಲೇಖಕಿ ಡಾ. ಭಾರತಿ ಹಿರೇಮಠ ತೀರ್ಪುಗಾರರಾಗಿದ್ದರು.

ಅಗಸನಕಟ್ಟೆಯವರ ಜನ್ಮ ದಿನವಾದ ಜೂನ್‌ 3 ರಂದು ಸಂಜೆ 4.30ಕ್ಕೆ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಿರಿಯ ಕತೆಗಾರ ಡಾ.ರಾಘವೇಂದ್ರ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಜಯಾ ಅಗಸನಕಟ್ಟೆ ಉಪಸ್ಥಿತರಿರುವರು. ಅಕ್ಷರ ಸಾಹಿತ್ಯ ವೇದಿಕೆ, ಲಿಂಗರಾಜನಗರ ಪ್ರೋಬಸ್‌ ಕ್ಲಬ್‌ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಘವಾಂಕುರ ಪರಿಚಯ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯವರಾದ ರಾಘವಾಂಕುರ, ಈಗ ಹಂಪಿಯ ಕನ್ನಡ ವಿವಿಯಲ್ಲಿ ಪಿಎಚ್‌.ಡಿ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಪ್ಲಾಟ್‌ ಫಾರ್ಮ್‌ ನಂ.3 ಎಂಬ ಕಿರು ಕಾದಂಬರಿ ರಚಿಸಿದ್ದಾರೆ. ಹೀಗಂದ್ರ ಹ್ಯಾಂಗ ಎಂಬ ಚಿತ್ರಗವಿತೆಗಳ ಸಂಕಲನ ಹೊರತಂದಿದ್ದು, ಅದು ರಾಮ ಜಾಧವ ಗ್ರಂಥ ಪ್ರಶಸ್ತಿಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT