ಮುಂಬೈಯಲ್ಲೊಬ್ಬ ಕುಂದಾಪುರದ ಸಾಧಕ

7

ಮುಂಬೈಯಲ್ಲೊಬ್ಬ ಕುಂದಾಪುರದ ಸಾಧಕ

Published:
Updated:
ಮುಂಬೈಯಲ್ಲೊಬ್ಬ ಕುಂದಾಪುರದ ಸಾಧಕ

ವೃತ್ತಿ- ಪ್ರವೃತ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವೃತ್ತಿ ಅನಿವಾರ್ಯ. ಅದರೊಂದಿಗೆ ಉತ್ತಮ ಪ್ರವೃತ್ತಿ ಸೇರಿಕೊಂಡರೆ ಅದೊಂದು ತುಂಬಿದ ಕೊಡ. ವೃತ್ತಿಗೆ ನೀಡಿದಷ್ಟೆ ಮಹತ್ವವನ್ನು ಪ್ರವೃತ್ತಿಗೂ ನೀಡಿದವರು ವೆಂಕಟೇಶ ಅನಂತ ಪೈ ಅವರು.

ಉಡುಪಿ ಜಿಲ್ಲೆಯ ಕುಂದಾಪುರದ ಮದ್ದುಗುಡ್ಡೆಯಲ್ಲಿ 1959 ರಲ್ಲಿ ಜನಿಸಿದ ಪೈಯವರು ಕುಂದಾಪುರದ ಬೋರ್ಡ್ ಹೈಸ್ಕೂಲ್‍ನ ಹಳೆ ವಿದ್ಯಾರ್ಥಿ. 1983 ರಿಂದ ಮುಂಬೈ ಸರ್ಕಾರಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾಗಿ ಅಲ್ಲೇ ನೆಲೆಸಿದ್ದಾರೆ. ತಮ್ಮ ಸಮಾಜಮುಖಿ ಕಾರ್ಯಗಳಿಂದಾಗಿ ಡೊಂಬಿವಲಿ ವೆಂಕಟೇಶ ಪೈ ಎಂದೇ ಗುರುತಿಸಿಕೊಂಡಿರುವರು.

ಡೊಂಬಿವಲಿಯ ಜಿ.ಎಸ್.ಬಿ. ಮಂಡಳಿ, ಕರ್ನಾಟಕ ಸಂಘ, ಡಾ.ಜಿ.ಡಿ.ಜೋಶಿ ಪ್ರತಿಷ್ಠಾನ, ಮುಂಬೆಳಕು ಕನ್ನಡ ಬಳಗ, ಕುಂದಗನ್ನಡ ಬಳಗ, ಕುಂದಾಪುರ ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಂಘ ಮುಂಬೈ , ಯಕ್ಷಗಾನ ಕಲಾಪ್ರೇಮಿಗಳ ಸಂಘ, ಯಕ್ಷಗಾನ ಗೃಂಥಾಲಯ, ಕನ್ನಡ ಪುಸ್ತಕ ಮಾರಾಟ ಮಳಿಗೆ ಮುಂತಾದ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಮಾಜಿಕ ಕಳಕಳಿಯಿಂದ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವುದರೊಂದಿಗೆ ಹೊಲಿಗೆ ಯಂತ್ರಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕನ್ನಡ ಭಜನಾ ಕಮ್ಮಟ, ಸುಗಮ ಸಂಗೀತ, ಕನ್ನಡ ಕಲಿಕಾ ವರ್ಗ, ಮರಾಠಿ ಕಲಿಕಾ ವರ್ಗ ಅವೆಲ್ಲಕ್ಕೂ ಮಿಗಿಲಾಗಿ ಅವರ ಪರಿಸರ ಕಾಳಜಿ ದೂರದೃಷ್ಟಿಯಿಂದ ಕೂಡಿದೆ. ಫ್ರೆಂಡ್ಸ್ ಸ್ವಾವಲಂಬನ ಕೇಂದ್ರದ ಸಂಯೋಜಕರಾಗಿ ಬಟ್ಟೆ ಚೀಲಗಳ ಬಳಕೆಗೆ ನೀಡುತ್ತಿರುವ ಪ್ರೋತ್ಸಾಹ ಡೊಂಬಿವಲಿ ಪರಿಸರದಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಬಹುಮುಖ ಪ್ರತಿಭೆಯ ಪೈಯವರು ವಿಶ್ವಚೇತನ ಪ್ರಶಸ್ತಿ, ಅಮೋಘ ವರ್ಷ ಪ್ರಶಸ್ತಿ, ಯಕ್ಷ ಕಲೋತ್ತೇಜಕ ಪ್ರಶಸ್ತಿ, ರವಿಕಿರಣ ಪ್ರಶಸ್ತಿ , ರಂಗಗೌರವ ಪ್ರಶಸ್ತಿ , ಕುಂದಾಪುರ ಬೋರ್ಡ್ ಹೈಸ್ಕೂಲ್‍ನ 125ನೇ ವರ್ಷಾಚರಣೆ ಸಂದರ್ಭದಲ್ಲಿ ಸನ್ಮಾನ – ಹೀಗೆ ಹಲವು ಸನ್ಮಾನಗಲಿಗೆ ಭಾಜನರಾಗಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲೂ ಇವರ  ಅನುಭವದ ಮಾತುಗಳು ಪ್ರಸಾರ ಕಂಡಿವೆ.

ಸಾಮಾಜಿಕ ಚಿಂತಕರಾದ ವೆಂಕಟೇಶ ಪೈ ದಂಪತಿಗಳನ್ನು "ಚೈತನ್ಯ ಚಿಲುಮೆ" ಎಂಬ ಅಭಿನಂದನ ಗೃಂಥ ಸಮರ್ಪಿಸಿ ಇತ್ತೀಚೆಗೆ ಡೊಂಬಿವಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಮ್ಮೂರ ಪೈಗಳ ಸಾಧನೆ ಶ್ಲಾಘನೆಗೆ ಅರ್ಹ ಅಲ್ಲವೇ.

ಪಿ.ಜಯವಂತ ಪೈ, ಕುಂದಾಪುರ

***

ಪಿ.ಜಯವಂತ ಪೈ

“ನಂದಾದೀಪ” ಜಿ.ಎಸ್.ಬಿ.ಕೊಲನಿ, ಸರಕಾರಿ ಆಸ್ಪತ್ರೆ ಬಳಿ,

ಕುಂದಾಪುರ – 576 201

ಫೋನ್ : 08254-233323

ಮೊಬೈಲ್ : 9448347248

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry