ಪರಿಸರ ದಿನಾಚರಣೆ: ಬಾರದ ಅತಿಥಿಗಳು

7

ಪರಿಸರ ದಿನಾಚರಣೆ: ಬಾರದ ಅತಿಥಿಗಳು

Published:
Updated:

ಮೈಸೂರು: ಮಹಾನಗರಪಾಲಿಕೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಅತಿಥಿಗಳೇ ಬಾರದೇ ಆಭಾಸ ಉಂಟಾಯಿತು.

ಅರಮನೆ ಬಳಿಯ ಕೋಟೆ ಮಾರಮ್ಮ ದೇವಸ್ಥಾನ ಬಳಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್‌ ಉದ್ಘಾಟಿಸಬೇಕಿತ್ತು. ಆದರೆ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯು ಒಡೆಯರ್‌ ಅವರಿಗೆ ತಲುಪದೆ ಇದ್ದ ಕಾರಣ ಅವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಬೆಳಿಗ್ಗೆ 7ಕ್ಕೇ ಆರಂಭವಾಗಬೇಕಿದ್ದ ಕಾರ್ಯಕ್ರಮ 9 ಗಂಟೆಯಾದರೂ ಆರಂಭವಾಗಲಿಲ್ಲ.

ಪ‍ರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್‌ ಬಳಕೆ ಕುರಿತಂತೆ ಜಾಗೃತಿ ಕಾರ್ಯಕ್ರಮವಿತ್ತು. ಜತೆಗೆ ಸ್ವಚ್ಛತಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಯಾವೊಬ್ಬ ಅತಿಥಿಯೂ ಬಾರದೆ ಹೋದ ಕಾರಣ, ಪಾಲಿಕೆಯ ಪೌರಕಾರ್ಮಿಕರೇ ಸ್ವಚ್ಛತಾ ಕಾರ್ಯ ವನ್ನು ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry