ಟೋಲ್‌ಗೇಟ್‌ ನೌಕರರ ಪ್ರತಿಭಟನೆ: ಅರ್ಧ ದಿನ ಶುಲ್ಕರಹಿತ ಪ್ರಯಾಣ

7

ಟೋಲ್‌ಗೇಟ್‌ ನೌಕರರ ಪ್ರತಿಭಟನೆ: ಅರ್ಧ ದಿನ ಶುಲ್ಕರಹಿತ ಪ್ರಯಾಣ

Published:
Updated:
ಟೋಲ್‌ಗೇಟ್‌ ನೌಕರರ ಪ್ರತಿಭಟನೆ: ಅರ್ಧ ದಿನ ಶುಲ್ಕರಹಿತ ಪ್ರಯಾಣ

ಸಾಸ್ತಾನ (ಬ್ರಹ್ಮಾವರ): ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಸ್ತಾನ ಟೋಲ್ ಗೇಟ್‌ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸರಿಯಾದ ವೇತನ ನಿಗದಿ ಮಾಡಬೇಕು ಹಾಗೂ ತಾರತಮ್ಯ ಮಾಡಬಾರದು, ಕಾರ್ಮಿಕ ನಾಯಕರು ಗಳಿಗೆ ಕಿರುಕುಳ ನೀಡಬಾರದು, ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕು, ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.

ಟೋಲ್ ಮ್ಯಾನೇಜರ್ ರವಿಬಾಬು ಹಾಗೂ ಸಾಸ್ತಾನ ಟೋಲ್‌ನ ಮುಖ್ಯಸ್ಥ ಕೇಶವ ಮೂರ್ತಿ ಅವರು ಕಾರ್ಮಿಕ ಮುಖಂಡ ಯೋಗೇಶ ಕುಮಾರ್ ಮತ್ತು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ಇದೇ 10ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ ಸಿಬ್ಬಂದಿ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾದರು.

ಸಿಬ್ಬಂದಿಯ ಮುಷ್ಕರದಿಂದಾಗಿ ಟೋಲ್‌ಗೇಟ್‌ನಲ್ಲಿ ವಾಹನಗಳು 5 ಗಂಟೆಗಳ ಕಾಲ ಶುಲ್ಕ ರಹಿತವಾಗಿ ಸಂಚರಿಸಿದವು. ಕೋಟ ಪೊಲೀಸ್ ಠಾಣೆಯ ಸಂತೋಷ ಎ.ಕಾಯ್ಕಿಣಿ, ಸಿಬ್ಬಂದಿ ಉಪಸ್ಥಿತರಿದ್ದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry