4

ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿಲ್ಲ, ದಾಳಿ ತಪ್ಪಿಸಲು ಚಾಲಕ ಪ್ರಯತ್ನಿಸಿದ್ದರು!

Published:
Updated:
ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿಲ್ಲ, ದಾಳಿ ತಪ್ಪಿಸಲು ಚಾಲಕ ಪ್ರಯತ್ನಿಸಿದ್ದರು!

ಶ್ರೀನಗರ: ಶುಕ್ರವಾರ ಶ್ರೀನಗರದ ಜಾಮಿಯ ಮಸೀದಿ ರಸ್ತೆಯಲ್ಲಿ ಜನರ ಗುಂಪೊಂದು ಆ ದಾರಿಯಾಗಿ ಬರುತ್ತಿದ್ದ  ಸಿಆರ್‌ಪಿಎಫ್‌ ವಾಹನದ ಮೇಲೆ ಕಲ್ಲು ತೂರಾಟ ಮಾಡಿದೆ. ಈ ವೇಳೆ ಜನರ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಿಆರ್‌ಪಿಎಫ್‌ ವಾಹನದ ಚಾಲಕ ಪ್ರಯತ್ನಿಸಿದಾಗ ಪ್ರತಿಭಟನಾಕಾರರಲ್ಲಿ ಓರ್ವ ವ್ಯಕ್ತಿ ಚಕ್ರದೆಡೆಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನೊಬ್ಬ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ.

ವಾಹನದ ಚಕ್ರಕ್ಕೆ ಸಿಲುಕಿ ಯೋನಿಸ್ ಅಹಮದ್ ಮತ್ತು ಕೈಸರ್ ಅಹಮದ್ ಎಂಬವರಿಗೆ ತೀವ್ರ ಗಾಯಗಳಾಗಿತ್ತು. ಇವರಲ್ಲಿ ಕೈಸರ್ ನಿನ್ನೆ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಜನರ ಗುಂಪು ಭಾರತ ವಿರೋಧಿ ಘೋಷಣೆ ಕೂಗಿ ಪೊಲೀಸರ ಜತೆ ಜಗಳಕ್ಕಿಳಿದಿತ್ತು. ಆ ವೇಳೆ ಆ ದಾರಿಯಾಗಿ ಬರುತ್ತಿದ್ದ ಸಿಆರ್‌‍ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿತ್ತು.

[related]

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಆರ್‌ಪಿಎಫ್‌ ಪಿಆರ್‍ಒ ಸಂಜಯ್ ಶರ್ಮಾ, ಆ ವಾಹನದಲ್ಲಿ 28 ಬೆಟಾಲಿಯನ್ ಸೆಕೆಂಡ್ ಇನ್ ಕಮಾಂಡ್ ಎಸ್. ಎಸ್ ಯಾದವ್ ಅವರು ಇದ್ದರು ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರು ವಾಹನದ ತುಂಬಾ ಹತ್ತಿರ ಬಂದಿದ್ದರು. ಕೆಲವರು ವಾಹನದ ಮೇಲೆ ಹತ್ತಿದ್ದರು. ವಾಹನದೊಳಗೆ ಇದ್ದವರನ್ನು ಹತ್ಯೆ ಮಾಡುವ ರೋಷ ಆ ಪ್ರತಿಭಟನಾಕಾರರಲ್ಲಿತ್ತು. ಆ ಪರಿಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಯನ್ನು ರಕ್ಷಿಸಲು ವಾಹನ ಚಲಾಯಿಸಿದ್ದು ಈ ವೇಳೆ ಪ್ರತಿಭಟನಾಕಾರರು ವಾಹನದ ಚಕ್ರದಡಿ ಬಿದ್ದಿರಬಹುದು ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry