ವರುಣನ ಆರ್ಭಟಕ್ಕೆ ಮನೆಗಳ ಕುಸಿತ

7

ವರುಣನ ಆರ್ಭಟಕ್ಕೆ ಮನೆಗಳ ಕುಸಿತ

Published:
Updated:
ವರುಣನ ಆರ್ಭಟಕ್ಕೆ ಮನೆಗಳ ಕುಸಿತ

ಬೀಳಗಿ: ತಾಲ್ಲೂಕಿನ ಬಿಸನಾಳ, ತೆಗ್ಗಿ, ಗುಳಬಾಳ, ಬೂದಿಹಾಳ (ಎಸ್.ಜಿ) ಸೇರಿದಂತೆ ಸುತ್ತ ಮುತ್ತಲಿನ ಮುಂತಾದ ಗ್ರಾಮಗಳಲ್ಲಿ ಗುರುವಾರ ರಾತ್ರಿ ಮಿಂಚು, ಗುಡುಗು, ಬಿರುಗಾಳಿಯೊಂದಿಗೆ ಮಳೆ ಸುರಿದು ಅಪಾರ ಹಾನಿಯನ್ನುಂಟುಮಾಡಿದೆ.

ಹೊಲ ಗದ್ದೆಗಳಲ್ಲಿ ಪತ್ರಾಸ್ ಶೆಡ್ಡಿನಲ್ಲಿ ವಾಸಿಸುತ್ತಿದ್ದ ರೈತರ ಪತ್ರಾಸ್‌ಗಳು ಮಳೆಗಾಳಿಗೆ ಹಾರಿ ಹೋಗಿವೆ. ಕೆಲ ತೋಟಗಳಲ್ಲಿ ಗಾಳಿಗೆ ಚಿಕ್ಕ ಪುಟ್ಟ ಗಿಡ ಮರಗಳು ನೆಲಕ್ಕಪ್ಪಳಿಸಿವೆ. ತೆಗ್ಗಿ ಗ್ರಾಮದ ಜಯಪ್ಪ ಕೂಡಗಿ ಎಂಬುವವರ ತೋಟದಲ್ಲಿನ ಬಾಳೆ ಗಿಡಗಳು ಬಿದ್ದಿವೆ. ಕಿತ್ತು ಇಟ್ಟ ಶೇಂಗಾ ಬಳ್ಳಿಯ ತಪ್ಪಲು ತೊಯ್ದು ತೊಪ್ಪೆಯಾಗಿದೆ. ಬಿಸನಾಳದಲ್ಲಿ ತಾರವ್ವ ಕಂಬಾರ, ಶೇಖಪ್ಪ ಮನಗೂಳಿ, ಚಾಂದಸಾಬ್ ಬುಡ್ಡಪ್ಪಗೋಳ, ಹನಮಂತ ಮಾಳಗಿ, ಹನಮಂತ ರಾಮಪ್ಪ ಸಂಕಣ್ಣವರ ಅವರ ಮನೆಗಳು ಮಳೆಗೆ ಕುಸಿದು ಬಿದ್ದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry