ರಜೆಯ ಮೋಜು

7

ರಜೆಯ ಮೋಜು

Published:
Updated:
ರಜೆಯ ಮೋಜು

ಇಷ್ಟು ಬೇಗನೆ ಮುಗಿದೋಯ್ತೆ 

ನಮ್ಮ ಬೇಸಿಗೆ ಸೂಟಿ

ಹೇಗೆ ತಾನೆ ಮರಿಬೇಕಪ್ಪ 

ಹಳ್ಳಿಗೆ ನೀಡಿದ ಭೇಟಿ

ಎಲ್ಲರೂ ಕೂಡಿ ಆಡ್ತಾ ಇದ್ವಿ

ನಾವು ರೈಲಿನ ಆಟ

ಗೊತ್ತಿಲ್ದಂಗೆ ಕಲಿತೇಬಿಟ್ಟೆವು

ಹಲವು ಹೊಸ ಪಾಠ

ತೋಟ ಗದ್ದೆ ದಣಿಯದೆ ಸುತ್ತಿ

ಕುಡಿದೆವು ಎಳನೀರು

ಹಳ್ಳಿಯ ಬಿಟ್ಟು ಹೋಗೋದಂದ್ರೆ

ತುಂಬಾ ಬೇಜಾರು

ಸ್ಕೂಲಲಿ ನಮಗೆ ಸಿಗಬಹುದೇ

ಅಜ್ಜ ಅಜ್ಜಿಯ ಮಾತು

ಹಾಡು ಕಥೆಯ ಕೇಳ್ತಾ ಇದ್ವಿ

ಎಲ್ಲರೂ ಒಟ್ಟಿಗೆ ಕೂತು

ಎದ್ದಕೂಡಲೇ ಕಾಣುತಲಿತ್ತು

ಬಾನಲಿ ಹಕ್ಕಿ ಸಾಲು

ಬೇಡ ಅಂದ್ರು ಸಿಗತಾ ಇತ್ತು

ನಮಗೆ ಗಿಣ್ಣದ ಹಾಲು!

ಹೂವಿನ ಮೇಲೆ ಹಾರ‍್ತಾ ಇತ್ತು

ನೀಲಿ ಚಿಟ್ಟೆಯ ದಂಡು

ಬೆರಗಾಗಿ ನಾವು ನಿಲ್ತಾ ಇದ್ವಿ

ಚಿಗರಿಯ ಓಟ ಕಂಡು

ಎಂಥ ಚಂದ ನಮ್ಮ ಹಳ್ಳಿ

ತಣಿಸಿತು ನಮ್ಮ ಕುತೂಹಲ

ಮತ್ತೆ ರಜೆಯು ಸಿಕ್ಕಿದ ಮೇಲೆ

ಸೇರುವ ಮುಂದಿನ ಸಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry