ಗೋಗೇರಿ: ಹೂಳೆತ್ತುವ ಕಾಮಗಾರಿ ಪ್ರಾರಂಭ

7

ಗೋಗೇರಿ: ಹೂಳೆತ್ತುವ ಕಾಮಗಾರಿ ಪ್ರಾರಂಭ

Published:
Updated:

ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯ್ತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್‌ ಡ್ಯಾಂ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲಾಯಿತು.

ಗ್ರಾಮದ ಹೊನ್ನಪ್ಪ ಗಾರಗಿ ಎಂಬುವರ ಹೊಲದ ಹತ್ತಿರದ ಚೆಕ್ ಡ್ಯಾಂನಲ್ಲಿನ ಹೂಳೆತ್ತುವ ಕಾಮಗಾರಿ ನಡೆಯಿತು. 200ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು.

ಈ ವೇಳೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚನ್ನಪ್ಪ ಇಮ್ರಾಪೂರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಂದಾನಪ್ಪ ಗುಂಡೆ, ಸದಸ್ಯರಾದ ಗವಿಯಪ್ಪ ಗಾರಗಿ, ಕಳಕಪ್ಪ ಹೊರಪೇಟಿ, ಕಳಕಪ್ಪ ಅಡವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry