ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಾಧಿವಂತರಿಗೆ ಪೂಜೆಗೆ ಅನುಮತಿ

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಪೂಜಾ ವಿವಾದ
Last Updated 2 ಜೂನ್ 2018, 10:04 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿಯ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುವಂಶೀಯ ಉಪಾಧಿವಂತರಿಗೆ ಜಿಲ್ಲಾ ನ್ಯಾಯಾಲಯವು ತಾತ್ಕಾಲಿಕ ಅವಕಾಶ ನೀಡಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ ಅವರು ಮೇ 30ರಂದು ತಾತ್ಕಾಲಿಕ ‘ತಾಕಿತಾಜ್ಞೆ’ (ಇಂಜಕ್ಷನ್) ನೀಡಿದ್ದಾರೆ. ಇದರಿಂದ ಅವರ ಪೂಜಾ ಹಕ್ಕನ್ನು ನಾಲ್ಕು ವರ್ಷಗಳಿಂದ ನಿರಾಕರಿಸಿದ್ದ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಹಿನ್ನಡೆಯಾಗಿದೆ.

ಪ್ರಕರಣದ ಹಿನ್ನೆಲೆ: 2008 ಆ.12ರಂದು ಅಂದಿನ ಬಿಜೆಪಿ ಸರ್ಕಾ ರವು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. 2014 ಜುಲೈ ತಿಂಗಳಿನಲ್ಲಿ ಮಠದ ಆಡಳಿತವು ಅನುವಂಶೀಯ ಉಪಾಧಿವಂತರಿಗೆ ಪೂಜಾ ಹಕ್ಕನ್ನು ನಿರಾಕರಿಸಿತ್ತು.

‘ನೀವು ನಮ್ಮ ಪರ ಇರುವ ಉಪಾಧಿವಂತ ಮಂಡಲದ ಸದಸ್ಯ ರಾದರೆ ಮಾತ್ರ ಪೂಜೆಗೆ ಅವಕಾಶ ನೀಡುತ್ತೇವೆ’ ಎಂದು ಆಡಳಿತ ಮಂಡಳಿ ತಿಳಿಸಿತ್ತು. ಆದರೆ, ಅನುವಂಶೀಯ ಉಪಾಧಿವಂತರು, ‘ನಾವು ವಂಶಪಾರಂಪರ್ಯವಾಗಿ ಪೂಜಿಸುತ್ತ ಬಂದಿದ್ದೇವೆ. ನಾವು ಯಾವುದೇ ಮಂಡಲದ ಸದಸ್ಯರಾಗುವ ಅವಶ್ಯಕತೆಯಿಲ್ಲ. ನಾವು ದೇವಸ್ಥಾನದ ಆಡಳಿತಕ್ಕೆ ಒಪ್ಪುತ್ತೇವೆಯೇ ಹೊರತು ಮಂಡಲದ ಸದಸ್ಯರಾಗುವುದಿಲ್ಲ’ ಎಂದು ಹೇಳಿದ್ದರು.

ಈ ಸಂಬಂಧ ಚಿಂತಾಮಣಿ ಉಪಾಧ್ಯ ಹಾಗೂ ಇತರ 31 ಜನ ಕುಮಟಾ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅಲ್ಲಿ ಅರ್ಜಿದಾರರು ಮಧ್ಯಂತರ ತಡೆಯಾಜ್ಞೆ ಕೇಳಿದರು. ವಿಚಾರಣೆಯ ಕೊನೆಯ ಹಂತದಲ್ಲಿ ನ್ಯಾಯಾಧೀಶರ ವಿರುದ್ಧ ರಾಮಚಂದ್ರಾಪುರ ಮಠ ದವರು ಅವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಕರಣವು ಹೈಕೋರ್ಟ್‌ನ ಧಾರವಾಡ ಪೀಠದ ಮೆಟ್ಟಿಲೇರಿತು. ಅದರ ಆದೇಶದಂತೆ 2016ರಲ್ಲಿ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತು. ಅಲ್ಲಿ ಎರಡು ವರ್ಷಗಳ ವಿಚಾರಣೆ ನಡೆಯಿತು. ಪೂಜಾ ಹಕ್ಕು ವಂಶಪಾರಂಪರ್ಯವಾಗಿದೆ. ಕುಮಟಾ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೂ ಮಹಾ ಬಲೇಶ್ವರ ದೇವಸ್ಥಾನದಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಯಾವುದೇ ಅಡೆ ತಡೆಯುಂಟು ಮಾಡಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಜಿಲ್ಲಾ ನ್ಯಾಯಾಲಯ ತಾಕೀತು ಮಾಡಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಕೆ.ಟಿ.ಗೌಡ, ಅರುಣಾಚಲ ಹೆಗಡೆ, ಎಂ.ಎಲ್.ನಾಯ್ಕ ಹಾಗೂ ಸುರೇಶ ಅಡಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT