ಮೋದಿಯವರ 'ಸೆಕ್ಸಿಸ್ಟ್' ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ

7

ಮೋದಿಯವರ 'ಸೆಕ್ಸಿಸ್ಟ್' ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ

Published:
Updated:
ಮೋದಿಯವರ 'ಸೆಕ್ಸಿಸ್ಟ್' ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ

ನವದೆಹಲಿ: ಉಜ್ವಲ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸುವಾಗ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಮಾತೊಂದರ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿ ಈಗ ನಿಮ್ಮ ಮನೆಯವರು ಅಥವಾ ಪತಿ ದೇವರು ನಿಮ್ಮಲ್ಲಿ ಚಹಾ ಕೇಳಿದರೆ ನೀವು ತಕ್ಷಣ ಮಾಡಿಕೊಡುತ್ತೀರಿ, ಇದರಿಂದಾಗಿ ನಿಮ್ಮ ಮನೆಯಲ್ಲಿ ಜಗಳ ಕಡಿಮೆಯಾಗುತ್ತದೆ ಅಲ್ಲವೇ ?ಎಂದು ಹೇಳಿರುವುದಾಗಿ ರಿಯಲ್ ರಿಪೊರ್ಟ್ ಡಾಟ್ ಇನ್ ಪತ್ರಿಕೆ ವರದಿ ಮಾಡಿದೆ.

ಮೋದಿಯವರ ಈ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಟ್ವೀಟಿಗರು ಮಹಿಳೆಯರು ಪತಿಗೆ ಚಹಾ ಮಾಡಿಕೊಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ ಎಂದಿದ್ದಾರೆ.

ಈ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಕಾಂಗ್ರೆಸ್ ಮೋದಿಯವರು ಮಹಿಳೆಯರ ಬಗ್ಗೆ ಹೇಳಿರುವ ಹೇಳಿಕೆಗಳನ್ನು ಟೀಕಿಸಿ #SexistModi ಹ್ಯಾಶ್‍ಟ್ಯಾಗ್‍ನೊಂದಿಗೆ ಕಿರುವಿಡಿಯೊವೊಂದನ್ನು ಟ್ವೀಟಿಸಿದೆ. 

ಇದೀಗ ಟ್ವಿಟರ್‌ನಲ್ಲಿ #SexistModi  ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದ್ದು, ಬಿಜೆಪಿ-ಆರ್‍ಎಸ್‍ಎಸ್ ಮಹಿಳೆಯರ ಬಗ್ಗೆ ಹೇಳಿದ ಮಾತುಗಳ ಬಗ್ಗೆಯೂ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಧಾನಿ ಮೋದಿಯವರಿಗೆ ಲಿಂಗ ಸೂಕ್ಷ್ಮತೆ ಬಗ್ಗೆ ಪಾಠ ಅಗತ್ಯವಿದೆ ಎಂದು ಕಾಂಗ್ರೆಸ್ ವಿಡಿಯೊವೊಂದನ್ನು ಶೇರ್ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry