ದಿ.ಚಂದ್ರಶೇಖಗೌಡ ಪುತ್ಥಳಿ ತೆರವು; ದೂರು

7

ದಿ.ಚಂದ್ರಶೇಖಗೌಡ ಪುತ್ಥಳಿ ತೆರವು; ದೂರು

Published:
Updated:
ದಿ.ಚಂದ್ರಶೇಖಗೌಡ ಪುತ್ಥಳಿ ತೆರವು; ದೂರು

ಬಂಗಾರಪೇಟೆ: ಕುರುಬ ಸಮುದಾಯದ ನಾಯಕರೆಂದು ಬಿಂಬಿಸಿ ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದ ದಿ.ಚಂದ್ರಶೇಖರ್ಗೌಡ ಅವರ ಪುತ್ಥಳಿಯನ್ನು ಶುಕ್ರವಾರ ಪುರಸಭೆ ಕೆಡವಿ ನೆಲಕ್ಕೆ ಉರುಳಿಸಿದೆ.

ಸರ್ಕಾರದ ಸುತ್ತೋಲೆ ಹಾಗೂ ಪುರಸಭೆ ಆಡಳಿತ ನಿರ್ದೇಶನಾಲಯದ ಆದೇಶದಂತೆ ದಿ.ಚಂದ್ರಶೇಖರ್ಗೌಡ ಅವರ ಪತ್ಥಳಿ ತೆರವುಗೊಳಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಪುರಸಭೆ ಸಾಮಾನ್ಯಸಭೆಯಲ್ಲಿ ಕೈಗೊಂಡ ನಿರ್ದಾರದಂತೆ 2 ವರ್ಷದ ಹಿಂದೆ ಪುತ್ಥಳಿಯನ್ನು ಸ್ಥಾಪಿಸಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಶಾಸಕ ವರ್ತೂರು ಪ್ರಕಾಶ್ ಉದ್ಘಾಟಿಸಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಪಟ್ಟಣದ ವೆಂಕಟೇಶಪ್ಪ ಯೋಜನಾ ನಿರ್ದೇಶಕರಿಗೆ ದೂರು ನೀಡಿದ್ದರು. ಇಲ್ಲಿನ ಪುರಸಭೆ ಕೂಡ ಪುತ್ಥಳಿ ಸ್ಥಾಪನೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಮನ್ನಣೆ ನೀಡದ ಸರ್ಕಾರ ಕೂಡಲೆ ಪುತ್ಥಳಿಯನ್ನು ತೆರವುಗೊಳಿಸುವಂತೆ 6 ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಯಂತೆ ಪುತ್ಥಳಿ ಕೆಡವಲು ಪುರಸಭೆ ಕಳೆದ ಡಿಸೆಂಬರ್ ತಿಂಗಳಲಿ ಕಾರ್ಯಾಚರಣೆ ನಡೆಸಿತು. ಈ ಬಗ್ಗೆ ಮೊದಲೇ ಅರಿತ ಸಮುದಾಯದವರು ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಕುರುಬ ಪ್ರತಿಭಟನೆ ನಡೆಸಿದರು.

ಚಂದ್ರಶೇಖರ್ ಗೌಡ ಅವರ ಪುತ್ಥಳಿ ಕೆಡವಿದರೆ, ಪಟ್ಟಣದ ಚೆಕ್ಪೋಸ್ಟ್ ಬಳಿ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೂ ಅವಕಾಶ ಕೊಡಬಾರದು ಎಂದು ಪಟ್ಟು ಹಿಡಿದಿದ್ದರು.

ಚುನಾವಣೆ ಸಂದರ್ಭ ಗಲಾಟೆ ನಡೆಯಬಹುದು ಎನ್ನುವ ಕಾರಣಕ್ಕೆ ಪುತ್ಥಳಿ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ಪುರಸಭೆಗೆ ಈಚೆಗೆ ಮತ್ತೋಮ್ಮೆ ನೋಟೀಸ್ ಜಾರಿಮಾಡಿ ಪುತ್ಥಳಿ ತೆರವುಗೊಳಿಸುವಂತೆ ಸೂಚನೆ ನೀಡಿದ ನಿಟ್ಟಿನಲ್ಲಿ ಪುತ್ಥಳಿ ತೆರವುಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಠಾಣೆಯಲ್ಲಿ ದೂರು ದಾಖಲು

ಸಮುದಾಯದ ಗಮನಕ್ಕೆ ತರದೆ ಮುಖಂಡ ದಿ.ಚಂದ್ರಶೇಖರ್ ಗೌಡ ಅವರ ಪುತ್ಥಳಿಯನ್ನು ಕೆಡವಲಾಗಿದೆ. ಸೂಕ್ತ ಕ್ರಮ ಜರುಗಿಸಬೇಕು ಎಂದು ಕುರುಬ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಾಮಕೃಷ್ಣಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ವೇಳೆ ಪುರಸಭೆ ಕೆಡವಿದ್ದರೆ, ಹಗಲು ವೇಳೆ ಕಾರ್ಯಾಚರಣೆ ನಡೆಸಬೇಕಿತ್ತು. ರಾತ್ರಿ ವೇಳೆ ಪುತ್ಥಳಿ ಉರುಳಿಸುವ ಅಗತ್ಯವೇನಿತ್ತು ಎಂದು ಎಲ್.ರಾಮಕೃಷ್ಣಪ್ಪ ಪ್ರಶ್ನಿಸಿದ್ದಾರೆ. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry