ಸಿಂಗಾಪುರದಲ್ಲಿ ಆರ್ಕಿಡ್‌ಗೆ ’ನರೇಂದ್ರ ಮೋದಿ’ ಹೆಸರು

7
ರಾಷ್ಟ್ರೀಯ ಆರ್ಕಿಡ್‌ ಗಾರ್ಡನ್‌

ಸಿಂಗಾಪುರದಲ್ಲಿ ಆರ್ಕಿಡ್‌ಗೆ ’ನರೇಂದ್ರ ಮೋದಿ’ ಹೆಸರು

Published:
Updated:
ಸಿಂಗಾಪುರದಲ್ಲಿ ಆರ್ಕಿಡ್‌ಗೆ ’ನರೇಂದ್ರ ಮೋದಿ’ ಹೆಸರು

ಸಿಂಗಾಪುರ: ಇಲ್ಲಿನ ರಾಷ್ಟ್ರೀಯ ’ಆರ್ಕಿಡ್‌ ಗಾರ್ಡನ್‌’ ಆರ್ಕಿಡ್‌ವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ನೀಡಿದೆ.

ಸಿಂಗಾಪುರದ ಆರ್ಕಿಡ್‌ ಗಾರ್ಡನ್‌ ಪ್ರಧಾನಿ ಮೋದಿ ಅವರ ಭೇಟಿಯ ನೆನಪಿಗಾಗಿ ಉಷ್ಣವಲಯದಲ್ಲಿ ಬೆಳೆಯುವ ಆರ್ಕಿಡ್‌ಗೆ ’ಡೆಂಡ್ರೋಬ್ರಿಯಮ್‌ ನರೇಂದ್ರ ಮೋದಿ’ ಎಂದು ನಾಮಕರಣ ಮಾಡಿರುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌ ಟ್ವೀಟಿಸಿದ್ದಾರೆ.

38 ಸೆಂ.ಮೀ. ಉದ್ದದ ಸಸ್ಯವು 14–20 ಹೂವುಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ.

ಮೂರು ರಾಷ್ಟ್ರಗಳ ಐದು ದಿನಗಳ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಕೊನೆಯ ದಿನ ಸಿಂಗಾಪುರಕ್ಕೆ ಭೇಟಿ ನೀಡಿದರು. ಇಲ್ಲಿನ ಮಾರಿಯಮ್ಮ ದೇವಾಲಯ, ಬೌದ್ಧ ಮಂದಿರ ಹಾಗೂ ಪ್ರಾಚೀನ ಮಸೀದಿಗೆ ಭೇಟಿ ನೀಡಿದರು.

ಐಎನ್‌ಎಸ್‌ ಸಾತ್‌ಪುರ ಏರಿದ ಮೋದಿ, ಭಾರತೀಯ ನೌಕಾ ದಳವನ್ನು ಹುರಿದುಂಬಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry