ನದಿಯಲ್ಲಿ ಮುಳುಗಿ ಸಾವು

7

ನದಿಯಲ್ಲಿ ಮುಳುಗಿ ಸಾವು

Published:
Updated:

ತೀರ್ಥಹಳ್ಳಿ: ತಾಲ್ಲೂಕಿನ ಮಹಿಷಿ ಬಳಿ ತುಂಗಾ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು, ತಾಯಿ, ಮಗಳು ಶನಿವಾರ ಮೃತಪಟ್ಟಿದ್ದಾರೆ.

ಮಗಳು ಸಂಧ್ಯಾ (17) ಮೃತ ದೇಹ ಪತ್ತೆಯಾಗಿದ್ದು, ತಾಯಿ ಚಂದ್ರಕುಮಾರಿ (37) ಮೃತದೇಹ ಪತ್ತೆಯಾಗಿಲ್ಲ.

‘ಶಿವಮೊಗ್ಗದಲ್ಲಿನ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ನಾರಾಯಣ ಅವರ ಕುಟುಂಬ ಮಹಿಷಿ ಗ್ರಾಮದಲ್ಲಿನ ಅಶ್ವತ್ಥನಾರಾಯಸ್ವಾಮಿ ದೇವಸ್ಥಾನ ಹಾಗೂ ಉತ್ತರಾದಿ ಮಠಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯನ್ನು ರಕ್ಷಿಸಲು ಹೋದ ಮಗಳು ಸಂಧ್ಯಾ ನೀರುಪಾಲಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry