ನಾಗಪುರದಲ್ಲಿ ಉತ್ತರಿಸುವೆ: ಪ್ರಣವ್‌ ಮುಖರ್ಜಿ

7
ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಚಾರ

ನಾಗಪುರದಲ್ಲಿ ಉತ್ತರಿಸುವೆ: ಪ್ರಣವ್‌ ಮುಖರ್ಜಿ

Published:
Updated:
ನಾಗಪುರದಲ್ಲಿ ಉತ್ತರಿಸುವೆ: ಪ್ರಣವ್‌ ಮುಖರ್ಜಿ

ನವದೆಹಲಿ: ‘ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ನನ್ನ ನಿರ್ಧಾರದ ವಿರುದ್ಧ ಕೇಳಿ ಬಂದಿರುವ ಟೀಕೆಗಳಿಗೆ ನಾಗಪುರದಲ್ಲಿ ಉತ್ತರಿಸುತ್ತೇನೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯ್ದು ನೋಡಿ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಶನಿವಾರ ಸೂಚ್ಯವಾಗಿ ಹೇಳಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ತಮ್ಮ ನಿರ್ಧಾರದ ವಿರುದ್ಧ ಕೇಳಿ ಬಂದಿರುವ ಅಪಸ್ವರ, ಆಕ್ಷೇಪಗಳ ಕುರಿತು ಮಾತನಾಡಿರುವ ಅವರು,‘ಸಾಕಷ್ಟು ದೂರವಾಣಿ ಕರೆ ಮತ್ತು ಪತ್ರಗಳು ಬಂದಿವೆ. ಅವುಗಳಿಗೆ ಇದುವರೆಗೂ ಉತ್ತರವನ್ನೂ ನೀಡಿಲ್ಲ’ಎಂದು ಮುಖರ್ಜಿ ಹೇಳಿದ್ದಾರೆ.

‘ನಾನು ಹೇಳಬೇಕು ಎಂದುಕೊಂಡಿರುವುದನ್ನು ನಾಗಪುರದಲ್ಲಿಯೇ ಹೇಳುವೆ. ಎಲ್ಲ ರೀತಿಯ ಟೀಕೆ, ಆಕ್ಷೇಪಗಳಿಗೆ ಅಲ್ಲಿಯೇ ಉತ್ತರಿಸುವೆ’ ಎಂದು ಬಂಗಾಳಿ ಪತ್ರಿಕೆಗೆ ತಿಳಿಸಿದ್ದಾರೆ.

ಜೂನ್‌ 7ರಂದು ನಾಗಪುರದಲ್ಲಿ ರಾಷ್ಟ್ರೀಯತೆ ಕುರಿತು ಸಂಘ ಪರಿವಾರದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಪಿ.ಚಿದಂಬರಂ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು, ಮುಖರ್ಜಿ ಅವರ ಈ ತೀರ್ಮಾನವನ್ನು ಕಟುವಾಗಿ ಟೀಕಿಸಿದ್ದಾರೆ. ನಿರ್ಧಾರ ಮರು ಪರಿಶೀಲಿಸುವಂತೆ ಸಲಹೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry