‘ಚಂದ್ರಿಕಾ’ ಮಂಗಲ ಮಹೋತ್ಸವ ಆರಂಭ

7

‘ಚಂದ್ರಿಕಾ’ ಮಂಗಲ ಮಹೋತ್ಸವ ಆರಂಭ

Published:
Updated:
‘ಚಂದ್ರಿಕಾ’ ಮಂಗಲ ಮಹೋತ್ಸವ ಆರಂಭ

ರಾಯಚೂರು: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ‘ಚಂದ್ರಿಕಾ’ ಗ್ರಂಥದ ಬೋಧನೆ ಪಡೆದ ಆಚಾರ್ಯರನ್ನು ವಿದ್ವಾಂಸರು ಪರೀಕ್ಷೆ ಮಾಡುವ ಎರಡು ದಿನಗಳ ‘ಚಂದ್ರಿಕಾ ಮಂಗಲ ಮಹೋತ್ಸವ’ ಶನಿವಾರ ಆರಂಭವಾಯಿತು.

ಮಠದ ಪ್ರಾಂಗಣದಲ್ಲಿ ವೈವಿಧ್ಯಮಯ ಪುಷ್ಪಾಲಂಕಾರದಿಂದ ಸಿದ್ಧಪಡಿಸಿದ್ದ ವೇದಿಕೆಯಲ್ಲಿ 22 ಆಚಾರ್ಯರು ಅನುವಾದವನ್ನು ಒಪ್ಪಿಸಿದರು. ದೇಶದ ವಿವಿಧ ಕಡೆಗಳಿಂದ ಬಂದಿದ್ದ ಮಠಾಧೀಶರು ಮತ್ತು ವಿದ್ವಾಂಸರು ಇದಕ್ಕೆ ಸಾಕ್ಷಿಯಾದರು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶ ತೀರ್ಥರು, ಉಡುಪಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ರಾಜಾ ಎಸ್‌. ಗಿರಿಯಾ

ಚಾರ್ಯ, ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜಾಚಾರ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry