ಬಸವನಬಾಗೇವಾಡಿ ಮತಗಟ್ಟೆ ಅಧಿಕಾರಿ ಬಂಧನ

7
ವಿ.ವಿ. ಪ್ಯಾಟ್‌ ಮುದ್ರಿತ ರಸೀದಿ ಸೋರಿಕೆ ಪ್ರಕರಣ

ಬಸವನಬಾಗೇವಾಡಿ ಮತಗಟ್ಟೆ ಅಧಿಕಾರಿ ಬಂಧನ

Published:
Updated:
ಬಸವನಬಾಗೇವಾಡಿ ಮತಗಟ್ಟೆ ಅಧಿಕಾರಿ ಬಂಧನ

ಬಸವನಬಾಗೇವಾಡಿ (ವಿಜಯಪುರ): ಬಸನವಬಾಗೇವಾಡಿ ವಿಧಾನಸಭಾ ಕ್ಷೇತ್ರದ ಉಕ್ಕಲಿ ಗ್ರಾಮದಮತಗಟ್ಟೆ ಸಂಖ್ಯೆ–12ರಲ್ಲಿ, ವಿ.ವಿ. ಪ್ಯಾಟ್‌ನ ಮುದ್ರಿತ ರಸೀದಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಶುಕ್ರವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ವಿ.ವಿ. ಪ್ಯಾಟ್‌ ಸೋರಿಕೆ ಕುರಿತು ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ ಅವರು ಗುರುವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು, ಸಂಬಂಧಿಸಿದ ಮತಗಟ್ಟೆ ಅಧಿಕಾರಿಯಾಗಿದ್ದ ತಿಕೋಟಾ ತಾಲ್ಲೂಕಿನ ಬಾಬಾನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರವೀಂದ್ರ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಎಂದು ಮನಗೂಳಿ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry