ಏಷ್ಯನ್‌ ಅಥ್ಲೆಟಿಕ್ಸ್‌: ಆಳ್ವಾಸ್‌ನ ಐದು ಮಂದಿ ಸ್ಪರ್ಧೆ

7

ಏಷ್ಯನ್‌ ಅಥ್ಲೆಟಿಕ್ಸ್‌: ಆಳ್ವಾಸ್‌ನ ಐದು ಮಂದಿ ಸ್ಪರ್ಧೆ

Published:
Updated:
ಏಷ್ಯನ್‌ ಅಥ್ಲೆಟಿಕ್ಸ್‌: ಆಳ್ವಾಸ್‌ನ ಐದು ಮಂದಿ ಸ್ಪರ್ಧೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಐದು ಮಂದಿ ವಿದ್ಯಾರ್ಥಿಗಳು ಏಷ್ಯನ್‌ ಜೂನಿಯರ್‌ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತ ಅಥ್ಲೆಟಿಕ್ಸ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

18ನೇ ಏಷ್ಯನ್‌ ಕೂಟ ಜೂನ್‌ 6ರಿಂದ 10ರವರೆಗೆ ಜಪಾನ್‌ನ ಗಿಫುದಲ್ಲಿ ಆಯೋಜನೆಗೊಂಡಿದೆ.

100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್‌ ಮಂದಣ್ಣ, ಶಾಟ್‌ಪಟ್‌ನಲ್ಲಿ ಆಶಿಶ್‌, 400 ಮೀಟರ್ಸ್‌ ಓಟದಲ್ಲಿ ವಿ.ಶುಭಾ, ಬಾಲಕಿಯರ ವಿಭಾಗದ ಶಾಟ್‌ಪಟ್‌ನಲ್ಲಿ ಅನಾಮಿಕ ಮತ್ತು ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ ಅವರು ಕಣಕ್ಕಿಳಿಯಲಿದ್ದಾರೆ.

ಇವರು ಕಳೆದ ತಿಂಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಏಷ್ಯನ್‌ ಕೂಟಕ್ಕೆ ಅರ್ಹತೆ ಗಳಿಸಿದ್ದರು.

ಬಾಲಕರ ಶಾಟ್‌ಪಟ್‌ನಲ್ಲಿ ಆಶಿಶ್‌, ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು 18.53 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ಗಮನ ಸೆಳೆದಿದ್ದರು.

100 ಮೀಟರ್ಸ್‌ ಓಟ ಮತ್ತು 4X100 ಮೀಟರ್ಸ್‌ ರಿಲೇಯಲ್ಲಿ ಚಿನ್ನದ ಸಾಧನೆ ಮಾಡಿದ್ದ ಪ್ರಜ್ವಲ್‌, ಕೂಟದ ವೇಗದ ಓಟಗಾರ ಗೌರವಕ್ಕೂ ಪಾತ್ರರಾಗಿದ್ದರು.

ಶಾಟ್‌ಪಟ್‌ನಲ್ಲಿ ಅನಾಮಿಕ ಮತ್ತು 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ವಿ.ಶುಭಾ ಬೆಳ್ಳಿಯ ಪದಕ ಜಯಿಸಿದ್ದರು. ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry