ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ವರಮಾನ ಕುಸಿತ

Last Updated 2 ಜೂನ್ 2018, 19:37 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೇ ತಿಂಗಳ ಸಂಗ್ರಹವು ₹ 94,016 ಕೋಟಿಗಳಷ್ಟಾಗಿದೆ.

ಏಪ್ರಿಲ್‌ ತಿಂಗಳಲ್ಲಿ ₹ 1.03 ಲಕ್ಷ ಕೋಟಿಗಳಷ್ಟು ತೆರಿಗೆ ವರಮಾನ ಸಂಗ್ರಹಗೊಂಡಿತ್ತು. 62.47 ಲಕ್ಷ ವಹಿವಾಟುದಾರರು ಮೇ ತಿಂಗಳಲ್ಲಿ  ತಮ್ಮ ಮಾರಾಟ ವಹಿವಾಟಿನ ವಿವರಗಳನ್ನು (ಜಿಎಸ್‌ಟಿಆರ್‌–3ಬಿ) ಸಲ್ಲಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಂಗ್ರಹಗೊಂಡಿರುವ ₹ 94 ಸಾವಿರ ಕೋಟಿ ತೆರಿಗೆಯಲ್ಲಿ ಕೇಂದ್ರದ ಜಿಎಸ್‌ಟಿ ₹ 15,866 ಕೋಟಿ, ರಾಜ್ಯ ಜಿಎಸ್‌ಟಿ ₹ 21,691 ಕೋಟಿ, ಸಮನ್ವಯ ಜಿಎಸ್‌ಟಿ ₹ 48,120 ಕೋಟಿ ಮತ್ತು ಸೆಸ್‌ ರೂಪದಲ್ಲಿ ₹ 7,339 ಕೋಟಿ ಸಂಗ್ರಹವಾಗಿದೆ.

ಏಪ್ರಿಲ್ ತಿಂಗಳ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಮೇ ತಿಂಗಳ ಸಂಗ್ರಹವು ಕಡಿಮೆಯಾಗಿದೆ. ಆದರೆ, 2017–18ರ ಹಣಕಾಸು ವರ್ಷದಲ್ಲಿನ ಸರಾಸರಿ ಸಂಗ್ರಹಕ್ಕೆ (₹ 89,885 ಕೋಟಿ) ಹೋಲಿಸಿದರೆ ಇದು ಹೆಚ್ಚಿನ ಮಟ್ಟದಲ್ಲಿ ಇದೆ. ವರ್ಷಾಂತ್ಯದ ಕಾರಣಕ್ಕೆ ಏಪ್ರಿಲ್‌ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿತ್ತು ಎಂದು ಸಚಿವಾಲಯ ಮಾಹಿತಿ ನೀಡಿದೆ.

ರಾಜ್ಯಗಳಿಗೆ ಪರಿಹಾರ: ರಾಜ್ಯಗಳಿಗೆ ಪರಿಹಾರ ರೂಪದಲ್ಲಿ ಮಾರ್ಚ್‌ ತಿಂಗಳಲ್ಲಿ ₹ 6,696 ಕೋಟಿ ಬಿಡುಗಡೆ ಮಾಡಲಾಗಿದೆ.

2017ರ ಜುಲೈ ತಿಂಗಳಿನಿಂದ 2018ರ ಮಾರ್ಚ್‌ವರೆಗಿನ ಅವಧಿಯಲ್ಲಿ ಒಟ್ಟು ₹ 47,844 ಕೋಟಿಗಳಷ್ಟು ಪರಿಹಾರವನ್ನು ರಾಜ್ಯಗಳಿಗೆ ವಿತರಿಸಲಾಗಿದೆ.

‘ಇ–ವೇ ಬಿಲ್‌ ಜಾರಿಗೆ ಬಂದ ನಂತರ ತೆರಿಗೆ ಪಾವತಿಯಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತಿದೆ.’

– ಹಸ್ಮುಖ್ ಆಧಿಯಾ, ಹಣಕಾಸು ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT