ಸೋಮವಾರ, ಡಿಸೆಂಬರ್ 9, 2019
24 °C

ಶೀಘ್ರವೇ ರಾಷ್ಟ್ರೀಯ ವಿದ್ಯುನ್ಮಾನ ನೀತಿ

Published:
Updated:
ಶೀಘ್ರವೇ ರಾಷ್ಟ್ರೀಯ ವಿದ್ಯುನ್ಮಾನ ನೀತಿ

ನವದೆಹಲಿ: ವಿದ್ಯುನ್ಮಾನ ಸಲಕರಣೆಗಳ ಸಂಶೋಧನೆ, ವಿನ್ಯಾಸ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಹೊಸ ರಾಷ್ಟ್ರೀಯ ವಿದ್ಯುನ್ಮಾನ ನೀತಿ ಜಾರಿಗೆ ತರಲಿದೆ.

‘ಸದ್ಯಕ್ಕೆ ಅಸ್ತಿತ್ವದಲ್ಲಿಯೇ ಇಲ್ಲದ ಹೊಸ ತಲೆಮಾರಿನ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬಳಕೆಗೆ ದೇಶದಲ್ಲಿ ವಿಪುಲ ಅವಕಾಶಗಳಿವೆ. ಹೊಸ ನೀತಿಯು ಅತ್ಯಾಧುನಿಕ ಸಾಧನಗಳ ಸಂಶೋಧನೆ, ವಿನ್ಯಾಸಕ್ಕೆ ಉತ್ತೇಜನ ನೀಡಲಿದೆ’ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ ಕಾರ್ಯದರ್ಶಿ ಅಜಯ್‌ ಪ್ರಕಾಶ್‌ ಸಾವ್ಹನೆ ಹೇಳಿದ್ದಾರೆ. ಅಸೋಚಾಂ) ಸಮಾರಂಭದಲ್ಲಿ ಅವರು ಮಾತನಾಡಿದರು.

‘2025–30ರ ವೇಳೆಗೆ ಬಳಕೆಗೆ ಬರಲಿರುವ ವಿದ್ಯುನ್ಮಾನ ಸಾಧನ – ಸಲಕರಣೆಗಳ ವ್ಯಾಪಕ ಬಳಕೆಗೆ ಈ ನೀತಿಯು ಪೂರಕವಾಗಿರಲಿದೆ. ವೈದ್ಯಕೀಯ, ವಾಹನ ತಯಾರಿಕೆ, ವಿದ್ಯುತ್‌, ರಕ್ಷಣೆ ಮತ್ತಿತರ ಕ್ಷೇತ್ರಗಳಲ್ಲಿ ಹೊಸ ಬಗೆಯ ಸಲಕರಣೆಗಳು ಬಳಕೆಗೆ ಬರಲಿವೆ. ವಿದ್ಯುನ್ಮಾನ ವಲಯವು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಇಲಾಖೆಯು ಎಲ್ಲ ಭಾಗಿದಾರರ ಜತೆ ಮಾತುಕತೆ ನಡೆಸಿದೆ’ ಎಂದು ಹೇಳಿದ್ದಾರೆ.

2012ರಲ್ಲಿ ದೇಶದ ಮೊದಲ ವಿದ್ಯುನ್ಮಾನ ನೀತಿ ಜಾರಿಗೆ ತರಲಾಗಿತ್ತು. ಇದು ದೇಶದಲ್ಲಿ ಇಂತಹ ಸಲಕರಣೆಗಳ ತಯಾರಿಕಾ ಘಟಕಗಳನ್ನು ಗಮನಾರ್ಹ ಸಂಖ್ಯೆಯಲ್ಲಿ ಸ್ಥಾಪಿಸಲು ಉತ್ತೇಜನ ನೀಡಿತ್ತು.

ಪ್ರತಿಕ್ರಿಯಿಸಿ (+)