ಸೋಮವಾರ, ಡಿಸೆಂಬರ್ 9, 2019
25 °C

ಮಧುಗಿರಿ ಶಾಲೆ: ಕಳೆದ ಬಾರಿ ಒಬ್ಬ, ಈ ಬಾರಿ ಒಬ್ಬರೂ ದಾಖಲಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ ಶಾಲೆ: ಕಳೆದ ಬಾರಿ ಒಬ್ಬ, ಈ ಬಾರಿ ಒಬ್ಬರೂ ದಾಖಲಾಗಿಲ್ಲ

ಬೆಂಗಳೂರು: ಹೆಸರಘಟ್ಟ ಹೋಬಳಿ ಮಧುಗಿರಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಸಕ್ತ ಸಾಲಿನಲ್ಲಿ ಒಂದೇ ಒಂದು ಮಗು‌ವೂ ದಾಖಲಾತಿ ಪಡೆದಿಲ್ಲ!‌ 1994ರಲ್ಲಿ ಈ ಶಾಲೆಯನ್ನು ಆರಂಭಿಸಲಾಗಿದೆ. ಆಗ ಶಾಲೆಯಲ್ಲಿ ಐವತ್ತರಿಂದ ಅರವತ್ತು ಮಕ್ಕಳು ದಾಖಾಲಾಗುತ್ತಿದ್ದರು.

ಈ ಗ್ರಾಮದ ಸುತ್ತಲಿನ ಏಳೆಂಟು ಗ್ರಾಮಗಳ ಮಕ್ಕಳು ಇಲ್ಲಿಗೆ ಬರುತ್ತಿದ್ದರು. ಕೆಲವು ಮಕ್ಕಳು ಸುಮಾರು ಐದು ಕಿ.ಮೀ. ದೂರದಿಂದ ನಡೆದು ಶಾಲೆಗೆ ಬರುತ್ತಿದ್ದರು. ಖಾಸಗಿ ಶಾಲೆಗಳಿಂದಾಗಿ ಇಲ್ಲಿನ ದಾಖಲಾತಿ ಕುಗ್ಗುತ್ತಿದೆ ಎಂದು ಗ್ರಾಮದ ನಿವಾಸಿ ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

‘ಕಳೆದ ಶೈಕ್ಷಣಿಕ ಸಾಲಿನ ಒಬ್ಬ ಹುಡುಗ ದಾಖಲಾಗಿದ್ದ. ವಾರ್ಷಿಕ ಪರೀಕ್ಷೆ ವೇಳೆಗೆ ಅವನೂ ಶಾಲೆ ಬಿಟ್ಟು ಹೋದ. ಈ ವರ್ಷವಾದರೂ ಉತ್ತಮ ದಾಖಲಾತಿ ನಿರೀಕ್ಷೆಯಲ್ಲಿದ್ದೆವು’ ಎಂದು ಶಿಕ್ಷಕರು ತಿಳಿಸಿದರು.‌

ಸೊಣ್ಣೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ‘ಸರ್ಕಾರಿ ಶಿಕ್ಷಕರು ಬಾಗಿಲು ತೆರೆದು ಕೂತರೆ ವಿದ್ಯಾರ್ಥಿಗಳು ಬರವುದಿಲ್ಲ. ಬದಲಿಗೆ ಮನೆ ಮನೆಗಳಿಗೆ ಹೋಗಿ ಸರ್ಕಾರಿ ಶಾಲೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು. ಆಗ ಪೋಷಕರೇ ಮಕ್ಕಳನ್ನು ತಂದು ಶಾಲೆಗೆ ಸೇರಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್, ‘ಜೂನ್ 30ರ ತನಕ ಕಾದು ನೋಡುತ್ತೇವೆ. ನಂತರವೂ ವಿದ್ಯಾರ್ಥಿಗಳು ದಾಖಲಾಗದಿದ್ದರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಬೇಕಾಗುತ್ತದೆ' ಎಂದು ಹೇಳಿದರು.

-ನಿರ್ವಾಣ ಸಿದ್ದಯ್ಯ

ಪ್ರತಿಕ್ರಿಯಿಸಿ (+)