ಬಿಇಎಲ್ ನಿರ್ದೇಶಕರಾಗಿ ಮಹೇಶ್

ಬೆಂಗಳೂರು: ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ಮಹೇಶ್ ವಿ. ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈವರೆಗೆ ಸಂಸ್ಥೆಯ ತಾಂತ್ರಿಕ ಯೋಜನಾ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದರು.
ಮಹೇಶ್, ನಗರದ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮುಗಿಸಿ 1985ರಲ್ಲಿ ಸಂಸ್ಥೆಗೆ ಸೇರಿದ್ದರು. 33 ವರ್ಷಗಳ ಸೇವಾವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಬಿಇಎಲ್ ಅಭಿವೃದ್ಧಿಪಡಿಸಿದ ಟೆಲಿಮೆಟ್ರಿ ವ್ಯವಸ್ಥೆ, ಇಸ್ರೋ ಜತೆ ಸೇರಿ ನಡೆಸಿದ ಉಪಗ್ರಹ ಉಡಾವಣಾ ವಾಹನಗಳ ನಿಗಾ ವ್ಯವಸ್ಥೆ, ಆ್ಯಂಟೆನಾ ರೂಪಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವೈಮಾನಿಕ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಕ್ರಾಂತಿಗೂ ಮುನ್ನ ರೇಡಾರ್ ವ್ಯಾಪ್ತಿಯನ್ನುವಿಸ್ತರಿಸುವಲ್ಲಿ ಪರಿಣತಿ ಸಾಧಿಸಿದ್ದರು. 2012ರಲ್ಲಿ ಬಿಇಎಲ್ನ ಕೇಂದ್ರ ಸಂಶೋಧನಾ ಪ್ರಯೋಗಾಲಯಕ್ಕೆ ಮುಖ್ಯ ವಿಜ್ಞಾನಿಯಾಗಿ ಬಡ್ತಿ ಹೊಂದಿದರು.
ಪ್ರತಿಕ್ರಿಯಿಸಿ (+)